alex Certify
ಕನ್ನಡ ದುನಿಯಾ       Mobile App
       

Kannada Duniya

ಬುಲೆಟ್ ಪ್ರಕಾಶ್, ದಿನಕರ್ ಗಲಾಟೆ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತಾ..?

dinakar-thoogudeep-and-bullet-prakash-fight-for-dates-of-darshan-2-04-1454562968

ನಟ ಬುಲೆಟ್ ಪ್ರಕಾಶ್, ನಿರ್ಮಾಪಕ- ನಿರ್ದೇಶಕ ದಿನಕರ್ ತೂಗುದೀಪ ಅವರ ನಡುವಿನ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರ ನಡುವೆ ಬೆಂಗಳೂರು ಅಮೃತ್ ಹಳ್ಳಿ ಠಾಣೆಯಲ್ಲಿ ರಾಜೀ ಸಂಧಾನ ನಡೆಸಲಾಗಿದೆ. ಆದರೆ, ಬುಲೆಟ್ ಪ್ರಕಾಶ್ ಇನ್ನೂ ರಾಜಿಯಾದಂತೆ ಕಂಡುಬಂದಿಲ್ಲ.

ದಿನಕರ್ ತೂಗುದೀಪ ತಮ್ಮನ್ನು ಕರೆಸಿಕೊಂಡು ಬೆದರಿಕೆ ಹಾಕಿದ್ದು, ಅವರ ಸಹಚರರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬುಲೆಟ್ ಪ್ರಕಾಶ್ ಆರೋಪಿಸಿ, ಅಮೃತ್ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾವನ್ನು ತಾವು ನಿರ್ಮಾಣ ಮಾಡುತ್ತಿದ್ದು, ಇದೇ ವಿಚಾರಕ್ಕೆ ದಿನಕರ್ ಬೆದರಿಕೆ ಹಾಕಿದ್ದಾರೆ ಎಂಬುದು ಬುಲೆಟ್ ಪ್ರಕಾಶ್ ಆರೋಪವಾಗಿತ್ತು. ಇದನ್ನು ಅಲ್ಲಗಳೆದ ದಿನಕರ್, ಅವರು 15 ವರ್ಷಗಳಿಂದ ಫ್ಯಾಮಿಲಿ ಫ್ರೆಂಡ್. ಇಬ್ಬರ ನಡುವೆ ತಪ್ಪು ತಿಳಿವಳಿಕೆಯಿಂದ ಹಾಗಾಗಿದ್ದು, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಪೊಲೀಸ್ ಠಾಣೆಯಲ್ಲಿ ಸಂಧಾನ ಮುಗಿಸಿ ಹೊರಬಂದ ದಿನಕರ್, ಇಬ್ಬರೂ ರಾಜಿಯಾಗಿದ್ದು, ಎಲ್ಲವೂ ಬಗೆಹರಿದಿದೆ ಎಂದರು. ದರ್ಶನ್ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಇಷ್ಟು ದೊಡ್ಡ ರಾದ್ಧಾಂತ ಮಾಡಿಕೊಂಡಿದ್ದೀರಾ? ಇಬ್ಬರೂ ಕುಳಿತು ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬಹುದಿತ್ತಲ್ಲ ಎಂದು ದರ್ಶನ್ ಹೇಳಿದ್ದಾಗಿ ದಿನಕರ್ ತಿಳಿಸಿದರು. ಬುಲೆಟ್ ಪ್ರಕಾಶ್ ಮಾತನಾಡಿ, ನಾನಿನ್ನು ದೂರನ್ನು ವಾಪಸ್ ಪಡೆದಿಲ್ಲ. ದರ್ಶನ್ ಸೇರಿದಂತೆ ಕೆಲವು ಪ್ರಮುಖರ ಸಮ್ಮುಖದಲ್ಲಿ ಮಾತುಕತೆ ನಡೆದ ನಂತರ ಸಮಸ್ಯೆ ಬಗೆಹರಿಯಬಹುದೆಂದು ಹೇಳಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...