alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಜತೆ ಸಲುಗೆಯಿಂದಿರುವ ಈ ನಟಿ ಯಾರು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಖಾಸಗಿಯಾಗಿರುವ ಫೋಟೋವನ್ನು ನಟಿ ಪವಿತ್ರಾ ಗೌಡ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ದರ್ಶನ್ ಅವರೊಂದಿಗೆ ಇರುವ ಚಿತ್ರ ಮಾತ್ರವಲ್ಲದೇ, ದರ್ಶನ್ ಅವರ ಪ್ರೀತಿಯ ಬಿಳಿ ಕುದುರೆಯೊಂದಿಗೆ ಇರುವ ಫೋಟೋವನ್ನು ಕೂಡ ಹಾಕಿದ್ದಾರೆ.

ದರ್ಶನ್ ಅವರಿಗೆ ಪ್ರಾಣಿ. ಪಕ್ಷಿಗಳೆಂದರೆ ಇಷ್ಟ. ತಮ್ಮ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿಗಳನ್ನು ಸಾಕಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಕುದುರೆಯೊಂದಿಗೆ ತೆಗೆಸಿಕೊಂಡ ಫೋಟೋವನ್ನು ಈ ಹಿಂದೆಯೇ ಪೋಸ್ಟ್ ಮಾಡಿದ್ದ ಪವಿತ್ರಾ, ಇಂದು ದರ್ಶನ್ ಜತೆಗೆ ಸಲುಗೆಯಿಂದ ಇರುವ ಫೋಟೋವನ್ನು ಕವರ್ ಪೇಜ್ ಫೋಟೋ ಆಗಿಸಿಕೊಂಡಿದ್ದಾರೆ. ಪವಿತ್ರಾ ಗೌಡ ಯಾವ ಉದ್ದೇಶದಿಂದ ಅಪ್ ಲೋಡ್ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ.

ಪವಿತ್ರಾ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’, ‘ಬತಾಸ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು.

ಟ್ವಿಟರ್ ನಲ್ಲಿ ದರ್ಶನ್ ಅವರು ಪವಿತ್ರಾ ಗೌಡ ಅವರನ್ನು ಫಾಲೋ ಮಾಡುತ್ತಿದ್ದು, ಪವಿತ್ರಾ ಅವರೂ ದರ್ಶನ್ ರನ್ನು ಫಾಲೋ ಮಾಡುತ್ತಿದ್ದಾರೆ.

ದರ್ಶನ್ ಅವರ ಮನೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಇತ್ತೀಚೆಗೆ ದರ್ಶನ್ ತಮ್ಮನ್ನು ನೆಗ್ಲೇಟ್ ಮಾಡುತ್ತಿರುವ ಕಾರಣದಿಂದ ಪವಿತ್ರಾ ಗೌಡ ಈ ಫೋಟೋ ಅಪ್ ಲೋಡ್ ಮಾಡಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...