alex Certify
ಕನ್ನಡ ದುನಿಯಾ       Mobile App
       

Kannada Duniya

ನೀವೆಂದೂ ನೋಡಿರದ ಲುಕ್ ನಲ್ಲಿ ದರ್ಶನ್ ಕಮಾಲ್

Chakravarthy

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ಅವರ ಬಹುನಿರೀಕ್ಷೆಯ ಚಿತ್ರ ‘ಜಗ್ಗುದಾದಾ’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಗಡ್ಡಬಿಟ್ಟ ದರ್ಶನ್ ಚಿನ್ನ ಲೇಪಿತ ಗನ್ ಹಿಡಿದು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

‘ಜಗ್ಗುದಾದಾ’ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಹೈಪ್ ಕ್ರಿಯೇಟ್ ಮಾಡಿದೆ. ಈ ಸಂದರ್ಭದಲ್ಲೇ ದರ್ಶನ್ ಅಭಿನಯದ ಮತ್ತೊಂದು ಸಿನೆಮಾದ ಸ್ಟಿಲ್ ರಿಲೀಸ್ ಆಗಿದೆ. 70-80ರ ದಶಕದಲ್ಲಿನ ಡ್ರೆಸ್ ನಲ್ಲಿ ಪ್ಲೇಮೌತ್ ಕಾರ್ ಬಳಿ ದರ್ಶನ್ ಸ್ಟೈಲಿಶ್ ಲುಕ್ ನಲ್ಲಿ ನಿಂತಿದ್ದಾರೆ. ಅಂದಹಾಗೇ ಇದು ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ಸ್ಟಿಲ್. ಹಿಂದೆಂದೂ ಕಾಣಿಸದ ಲುಕ್ ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಭೂಗತ ಜಗತ್ತಿನ ಕತೆ ಒಳಗೊಂಡ ಚಿತ್ರ ಇದಾಗಿದೆ ಎಂದು ಹೇಳಲಾಗಿದೆ.

ಬ್ರೈನ್, ಕ್ರೈಂ, ಡೆಡ್ಲಿ ಕಾಂಬಿನೇಷನ್ ಒಳಗೊಂಡಿರುವ ಸಿನೆಮಾವನ್ನು ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದು, ಎಂ.ವಿ.ಚೇತನ್ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಜೊತೆಗೆ ಕತೆ, ಚಿತ್ರಕತೆ, ಸಂಭಾಷಣೆ ಕೂಡ ಬರೆದಿದ್ದಾರೆ. ದರ್ಶನ್ ಅಭಿನಯದ ಹಲವು ಚಿತ್ರಗಳಿಗೆ ಚೇತನ್ ಕೆಲಸ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...