alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಯೋಧನ ದರ್ಶನ್ ಗೆ ಡ್ಯಾನಿಷ್ ಚಾಲೆಂಜ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

ಹೈ ಬಜೆಟ್ ನಲ್ಲಿ ಅದ್ಧೂರಿ ತಾರಾಗಣದಲ್ಲಿ ನಿರ್ಮಾಣವಾಗುತ್ತಿರುವ ‘ಕುರುಕ್ಷೇತ್ರ’ವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ದರ್ಶನ್ ದುರ್ಯೋಧನನ ಪಾತ್ರದಲ್ಲಿ ಮಿಂಚುತ್ತಿದ್ದು, ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ಸೋನುಸೂದ್, ಶ್ರೀನಿವಾಸ ಮೂರ್ತಿ, ರವಿಶಂಕರ್, ಶ್ರೀನಾಥ್, ನಿಖಿಲ್ ಕುಮಾರ್ ಸೇರಿದಂತೆ ಹಲವು ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.

ಇವರೊಂದಿಗೆ ಭೀಮನಾಗಿ ಹಿಂದಿ ಕಿರುತೆರೆ ನಟ ಡ್ಯಾನಿಷ್ ಅಖ್ತರ್ ಸೈಫ್ ಭೀಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಟ್ಟುಮಸ್ತಾದ ದೇಹ ಹೊಂದಿರುವ ಡ್ಯಾನಿಷ್ ಅವರನ್ನು ಭೀಮನ ಪಾತ್ರಕ್ಕೆ ಆಯ್ಕೆ ಮಾಡಲು ದರ್ಶನ್ ಅವರೇ ಸೂಚಿಸಿದ್ದರಂತೆ. ದರ್ಶನ್ ಮತ್ತು ಡ್ಯಾನಿಷ್ ಜಿಮ್ ನಲ್ಲಿ ಕಸರತ್ತು ನಡೆಸಿದ್ದಾರೆ.

ದರ್ಶನ್ ಅಭಿನಯದ ‘ತಾರಕ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ‘ಕುರುಕ್ಷೇತ್ರ’ದ ಕುತೂಹಲ ಹೆಚ್ಚಾಗತೊಡಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...