alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ‘ಜಗ್ಗುದಾದಾ’ ಹಾಡಿನ ವಿಶೇಷತೆ ಏನು ಗೊತ್ತಾ?

dar 852

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅವರ ಮತ್ತೊಂದು ಬಹುನಿರೀಕ್ಷೆಯ ಚಿತ್ರ ‘ಜಗ್ಗುದಾದಾ’ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಚಿತ್ರದ ಹಾಡಿನ ಕುರಿತು ಮಾಹಿತಿ ಇಲ್ಲಿದೆ.

‘ಜಗ್ಗುದಾದಾ’ ಸಿನೆಮಾದ ಈ ಹಾಡಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಟ್ ಹಾಕಲಾಗಿದೆ. ಇದೇ ಸ್ಥಳದಲ್ಲಿ ನಟ ಶಿವರಾಜ್ ಕುಮಾರ್ ಪುತ್ರಿಯ ಮದುವೆ ನೆರವೇರಿತ್ತು. ‘ಜಗ್ಗುದಾದಾ’ ಸಿನೆಮಾದಲ್ಲಿ ವಿಶೇಷವಾಗಿರುವ ಮದುವೆ ಸಂಭ್ರಮದ ಈ ಹಾಡಿನಲ್ಲಿ ದರ್ಶನ್ ಸಖತ್ ಸ್ಟೆಪ್ ಹಾಕಿದ್ದಾರೆ. ಅವರೊಂದಿಗೆ 450 ಜೂನಿಯರ್ ಆರ್ಟಿಸ್ಟ್, 110 ಡ್ಯಾನ್ಸರ್ಸ್, 20 ಹಿರಿಯ ಮಹಿಳೆಯರು ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅರಮನೆ ಮೈದಾನದಲ್ಲಿ ಹಾಕಿರುವ ಮದುವೆ ಸೆಟ್ ನಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ ಎಂದು ಹೇಳಲಾಗಿದೆ.

ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ ಈ ಕುರಿತು ಮಾಹಿತಿ ನೀಡಿದ್ದು, ಈ ಹಾಡನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಅಲ್ಲದೇ, ಚಿತ್ರದಲ್ಲಿನ ಕೆಲವು ಹಾಡುಗಳ ಚಿತ್ರೀಕರಣ ಇಟಲಿಯಲ್ಲಿ ನಡೆಯಲಿದೆ. ವಿ. ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...