alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾರ್ಟಿ

12745563_1515619985408181_1813473364194561935_n

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ನೆಚ್ಚಿನ ನಟನ ಬರ್ತಡೇಯನ್ನು ಇತ್ತೀಚೆಗಷ್ಟೇ ಅದ್ದೂರಿಯಾಗಿ ಆಚರಿಸಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಈ ವರ್ಷ ಹಬ್ಬವಿದ್ದಂತೆ. ಅವರ ಅಭಿನಯದ ‘ವಿರಾಟ್’ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇದರೊಂದಿಗೆ ಬಹುನಿರೀಕ್ಷೆಯ ‘ಜಗ್ಗುದಾದಾ’ ಬಿಡುಗಡೆಯ ಸನಿಹಕ್ಕೆ ಬಂದಿದೆ. ಇದರೊಂದಿಗೆ ದರ್ಶನ್ ಅಭಿನಯದ ‘ಚಕ್ರವರ್ತಿ’ ಪೋಟೋ ಶೂಟ್ ಕಮಾಲ್ ಮಾಡುತ್ತಿದೆ. ಇದೆಲ್ಲಾ ಇರಲಿ ದರ್ಶನ್ ಅವರಿಗೆ ಗೆಳೆಯರ ಸಂಖ್ಯೆ ಜಾಸ್ತಿ. ತಮ್ಮ ಬಿಡುವಿನ ವೇಳೆಯನ್ನು ದರ್ಶನ್ ಸ್ನೇಹಿತರೊಂದಿಗೆ ಕಳೆಯುತ್ತಾರೆ. ಮೈಸೂರಿನಲ್ಲಿರುವ ದರ್ಶನ್ ತೋಟದ ಮನೆಯಲ್ಲಿ ಗೆಳೆಯರೊಂದಿಗೆ ಸೇರಿ ದರ್ಶನ್ ಪಾರ್ಟಿ ಮಾಡಿದ್ದಾರೆ. ಅಲ್ಲದೇ, ಪಾರ್ಟಿಗೆ ಬೇಕಾದ ಅಡುಗೆಯನ್ನು ಮಾಡಲು ತಾವು ಕೂಡ ಕೈ ಜೋಡಿಸಿದ್ದಾರೆ.

ಮೈಸೂರಿನ ತೋಟದ ಮನೆಯಲ್ಲಿ ದರ್ಶನ್ ತಮ್ಮ ಸ್ನೇಹಿತ ಸೃಜನ್ ಲೋಕೇಶ್ ಸೇರಿದಂತೆ ಹಲವರೊಂದಿಗೆ ಕಾಲ ಕಳೆದಿದ್ದಾರೆ. ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಹಲವಾರು ಪ್ರಾಣಿಪಕ್ಷಿಗಳನ್ನು ದರ್ಶನ್ ಸಾಕಿದ್ದಾರೆ. ಇದೀಗ ಸ್ನೇಹಿತರ ಜೊತೆ ಸೇರಿ ಅಡುಗೆ ಮಾಡಿದ್ದು, ವಿಶೇಷವಾಗಿದೆ. ಈ ಫೋಟೋವನ್ನು ದರ್ಶನ್, ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದು, ಆಪಾರ ಸಂಖ್ಯೆಯ ಅಭಿಮಾನಿಗಳು ಲೈಕ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...