alex Certify
ಕನ್ನಡ ದುನಿಯಾ       Mobile App
       

Kannada Duniya

ಸುದೀಪ್, ದರ್ಶನ್ ಸ್ನೇಹ ಮುರಿದು ಬೀಳಲು ಕಾರಣ ಗೊತ್ತಾ..?

star-ssdad

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಡುವೆ ಮನಸ್ತಾಪ ಉಂಟಾಗಿದೆ. ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳ ನಡುವಿನ ಸ್ನೇಹ ಮುರಿದು ಬಿದ್ದಿದ್ದು, ಭಾರೀ ಸಂಚಲನವನ್ನೇ ಮೂಡಿಸಿದೆ.

‘ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವಿಬ್ಬರು ಸ್ಯಾಂಡಲ್ ವುಡ್ ಕಲಾವಿದರು ಅಷ್ಟೇ. ಇನ್ನು ಮುಂದೆ ಊಹಾಪೋಹಗಳೆಲ್ಲಾ ಬೇಡ, ಎಲ್ಲವನ್ನೂ ಮರೆತು ಬಿಡಿ’ ಎಂದು ಟ್ವಿಟರ್ ನಲ್ಲಿ ದರ್ಶನ್ ಪೋಸ್ಟ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.

ಇದಾದ ಬೆನ್ನಲ್ಲೇ ದರ್ಶನ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಸುದೀಪ್ ಮಾತನಾಡುತ್ತಾ, ‘ಮೆಜೆಸ್ಟಿಕ್’ನಲ್ಲಿ ನಟಿಸೋಕೆ ನನಗೆ ಅವಕಾಶ ಬಂದಿತ್ತು. ಕಾರಣಾಂತರದಿಂದ ನಾನು ನಟಿಸಲು ಆಗಲಿಲ್ಲ. ಏಕೆ ದರ್ಶನ್ ಗೆ ಅವಕಾಶ ನೀಡಬಾರದೆಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ದರ್ಶನ್ ರನ್ನು ಮೊದಲು ನೋಡಿದಾಗ, ಯಾರಿವರು ಎಂದು ಕೇಳಿದ್ದೆ. ಹಿರಿಯ ನಟರಾದ ತೂಗುದೀಪ ಶ್ರೀನಿವಾಸ ಅವರ ಪುತ್ರರಾಗಿ ದರ್ಶನ್ ಗೆ ಏಕಾಏಕಿ ಅವಕಾಶ ಸಿಕ್ಕಿಲ್ಲ. ಅವರು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ ಎಂದು ಸುದೀಪ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ದರ್ಶನ್, ನಾನು ಈ ವಿಡಿಯೋವನ್ನು ಈಗಷ್ಟೇ ನೋಡಿದೆ. ನನಗೆ ಅವಕಾಶ ಕೊಡಿಸಿದ್ದು, ರಾಮಮೂರ್ತಿ, ರಮೇಶ್ ಮತ್ತು ನಿರ್ದೇಶಕ ಪಿ.ಎನ್. ಸತ್ಯ. ಮಾಡದಿರುವ ಕೆಲಸವನ್ನು ನಾನು ಮಾಡಿದೆ ಎಂದು ಏಕೆ ಸುದೀಪ್ ಹೇಳಿದ್ದಾರೆ. ಅವರು ನೀಡಿದ ಹೇಳಿಕೆ ನನಗೆ ನೋವು ತಂದಿದೆ. ಸುದೀಪ್ ಈ ಮಾತನ್ನು ಏಕೆ ಹೇಳಿದ್ದಾರೆ ಎಂಬುದರ ಬಗ್ಗೆ ಕ್ಲಾರಿಟಿ ನೀಡಬೇಕು ಎಂದು ದರ್ಶನ್ ತಿಳಿಸಿದ್ದಾರೆ.

ಆದರೆ, ಇಬ್ಬರ ಅಭಿಮಾನಿಗಳು ಇದನ್ನು ಒಪ್ಪುತ್ತಿಲ್ಲ. ದರ್ಶನ್ ಮತ್ತು ಸುದೀಪ್ ಒಳ್ಳೆಯ ಸ್ನೇಹಿತರಾಗಿದ್ದಾರೆ. ದರ್ಶನ್ ಟ್ವಿಟರ್ ಹ್ಯಾಕ್ ಆಗಿರಬಹುದಾದ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...