alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ…?

ನೆಚ್ಚಿನ ನಟರ ಬಗ್ಗೆ ಅಭಿಮಾನ ಹೊಂದುವುದು ತಪ್ಪೇನಲ್ಲ. ಆದರೆ, ನೆಚ್ಚಿನ ನಟರೊಂದಿಗೆ ಹೋಲಿಸಿ ಬೇರೆ ನಟರನ್ನು ಟೀಕಿಸುವುದು, ಟ್ರೋಲ್ ಮಾಡುವುದು ಇತ್ತೀಚೆಗೆ ಜಾಸ್ತಿಯಾಗಿದೆ.

ಸ್ಟಾರ್ ನಟರ ನಡುವೆ ಯಾವುದೇ ಪೈಪೋಟಿ ಇಲ್ಲದೇ ಅಭಿಮಾನಿಗಳಿಗೆ ಉತ್ತಮ ಚಿತ್ರಗಳನ್ನು ಕೊಡಲು ಮುಂದಾಗಿರುತ್ತಾರೆ. ಅಭಿಮಾನಿಗಳು ಅಭಿಮಾನ ವ್ಯಕ್ತಪಡಿಸುವ ಭರಾಟೆಯಲ್ಲಿ ಟ್ರೋಲ್ ಮಾಡಿ ಜಾಲತಾಣದಲ್ಲಿ ಹರಿಬಿಡುತ್ತಾರೆ. ಇದು ಮತ್ತೊಬ್ಬ ನಟನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತದೆ.

ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ನಡುವೆ ಇಂತಹುದೊಂದು ಟ್ರೋಲ್ ವಾರ್ ಆಗಿದೆ. ಇದು ಗಮನಕ್ಕೆ ಬರುತ್ತಲೇ ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಅವರು ಹಿಂದೆಯೇ ಇದನ್ನು ಹೇಳಿದ್ದು, ಅದನ್ನು ಡಿ ಕಂಪನಿ ಸದಸ್ಯರು ಮತ್ತೆ ಪೋಸ್ಟ್ ಮಾಡಿದ್ದಾರೆ. ‘ಅಭಿಮಾನಿಗಳಲ್ಲಿ ಮನವಿ, ನನಗೆ ನೋವಾಗುವಂತಹ ಕೆಲಸ ಮಾಡಬೇಡಿ. ಬೇರೆ ನಟರನ್ನು ನಿಂದಿಸುವುದು ಸರಿಯಲ್ಲ. ಎಲ್ಲರನ್ನು ಪ್ರೀತಿಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ’ ಎಂದು ದರ್ಶನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...