alex Certify
ಕನ್ನಡ ದುನಿಯಾ       Mobile App
       

Kannada Duniya

ಗರಂ ಆದ ದರ್ಶನ್ ಫ್ಯಾನ್ಸ್ ಸಾರಿ ಕೇಳಿದ ಸಂಜನಾ

sanjan-dars-fans

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ‘ಬಿಗ್ ಬಾಸ್’ ಖ್ಯಾತಿಯ ಸಂಜನಾ ಕ್ಷಮೆ ಯಾಚಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಕುರಿತಾಗಿ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ‘ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ ಮಂದಣ್ಣ ಅವರು, ರಾಕಿಂಗ್ ಸ್ಟಾರ್ ಯಶ್ ಕುರಿತಾಗಿ ನೀಡಿದ್ದ ಹೇಳಿಕೆ ವಿವಾದವಾಗಿ ಬಳಿಕ ತಣ್ಣಗಾಗಿತ್ತು.

ಈಗ ಸಂಜನಾ ಸರದಿ. ಅಕುಲ್ ಬಾಲಾಜಿ ನಡೆಸಿಕೊಡುವ ‘ಸೂಪರ್ ಟಾಕ್ ಟೈಂ’ನಲ್ಲಿ ಭಾಗವಹಿಸಿದ್ದ ಸಂಜನಾ, ದರ್ಶನ್ ಸಿನಿಮಾಗಳಲ್ಲಿ ಬಿಲ್ಡಪ್ ಜಾಸ್ತಿ ಇರುತ್ತೆ ಎಂದು ಹೇಳಿದ್ದು, ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.

ಅಕುಲ್ ಬಾಲಾಜಿ ‘ರ್ಯಾಪಿಡ್ ಫೈರ್ ರೌಂಡ್’ನಲ್ಲಿ ಬಿಲ್ಡಪ್ ಎಂದು ಕೇಳಿದ್ದು, ಇದಕ್ಕೆ ಸಂಜನಾ, ದರ್ಶನ್ ಸಿನಿಮಾಗಳಲ್ಲಿ ಬಿಲ್ಡಪ್ ಜಾಸ್ತಿ ಇರುತ್ತದೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ ಸಂಜನಾ ಸಾರಿ ಕೇಳಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...