alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಕ್ರವರ್ತಿ’ ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

dar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ, ಡಿಸೆಂಬರ್ 15 ರಿಂದ ಮೈಸೂರಿನಲ್ಲಿ ನಡೆಯಲಿದೆ.

ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ ‘ಚಕ್ರವರ್ತಿ’ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ. ನೋಟ್ ಬ್ಯಾನ್ ನಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದೆಲ್ಲಾ ಹೇಳಲಾಗಿತ್ತು. ಆದರೆ, ಇನ್ನೂ ಕೊನೆಯ ಹಂತದ ಚಿತ್ರೀಕರಣ ಪೂರ್ಣಗೊಳ್ಳಬೇಕಿದೆ. ನೋಟ್ ಕಾರಣದಿಂದಲೇ ಚಿತ್ರೀಕರಣ ತಡವಾಗಿದ್ದು, ಮೈಸೂರಿನಲ್ಲಿ ಕೊನೆಯ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿವೆ ಎನ್ನಲಾಗಿದೆ

ಚಿಂತನ್ ನಿರ್ದೇಶನದ ‘ಚಕ್ರವರ್ತಿ’ಯಲ್ಲಿ ಬಹುದೊಡ್ಡ ತಾರಾಗಣವಿದೆ. ಆದಿತ್ಯ, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ದೀಪಾ ಸನ್ನಿಧಿ, ದಿನಕರ್ ತೂಗುದೀಪ ಮೊದಲಾದವರು ಅಭಿನಯಿಸಿದ್ದಾರೆ.

ಡಾನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. 80 ರ ದಶಕದ ಕಥಾಹಂದರ ಒಳಗೊಂಡಿರುವ ‘ಚಕ್ರವರ್ತಿ’ಯಲ್ಲಿ 2 ವಿಭಿನ್ನ ಗೆಟಪ್ ಗಳಲ್ಲಿ ದರ್ಶನ್ ಮಿಂಚಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...