alex Certify
ಕನ್ನಡ ದುನಿಯಾ       Mobile App
       

Kannada Duniya

ಅಂದು ‘ಸಾಹಸಸಿಂಹ’ ವಿಷ್ಣು, ಇಂದು ‘ಸಾರಥಿ’ ದರ್ಶನ್

‘ಯಜಮಾನ’ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಹೆಸರಿನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ದರ್ಶನ್ ಅಭಿನಯದ 51 ನೇ ಚಿತ್ರಕ್ಕೆ ‘ಯಜಮಾನ’ ಟೈಟಲ್ ಫಿಕ್ಸ್ ಆಗಿದೆ.

ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಬಹುತಾರಾಗಣವಿದ್ದ ‘ಯಜಮಾನ’ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿತ್ತು. ದರ್ಶನ್ ಅಭಿನಯದ ‘ಯಜಮಾನ’ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ಶೈಲಜಾ ನಾಗ್ ನಿರ್ಮಾಣದಲ್ಲಿ ಪಿ. ಕುಮಾರ್ ನಿರ್ದೇಶನದಲ್ಲಿ ‘ಯಜಮಾನ’ ಮೂಡಿ ಬರಲಿದೆ.

ದರ್ಶನ್ ಹುಟ್ಟುಹಬ್ಬ ಆಚರಣೆ ಬಳಿಕ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್, ಧನಂಜಯ, ಠಾಕೂರ್ ಅನೂಪ್ ಸಿಂಗ್ ಮೊದಲಾದವರು ಅಭಿನಯಿಸಲಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯಾ ಚಿತ್ರದ ನಾಯಕಿಯರು. ವಿ.ಹರಿಕೃಷ್ಣ ಸಂಗೀತ ನೀಡಿದ್ದು, ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...