alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ

darshan-jaggu-dada-12

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲೂ ದಾಖಲೆ ಬರೆದಿದೆ. ‘ವಿರಾಟ್’ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಹೊರಹೊಮ್ಮಿದ್ದಾರೆ.

ದರ್ಶನ್ ಅಭಿನಯದ ‘ವಿರಾಟ್’ ಭರ್ಜರಿ ಯಶಸ್ಸು ಕಾಣುತ್ತಿರುವ ಸಂದರ್ಭದಲ್ಲೇ ಅವರ ಮತ್ತೊಂದು ಬಹುನಿರೀಕ್ಷೆಯ ಚಿತ್ರ ‘ಜಗ್ಗುದಾದಾ’ ಕೂಡ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಕ್ಲೈಮಾಕ್ಸ್ ಸೇರಿದಂತೆ ಮಾತಿನ ಬಹುಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಗೋವಾದಲ್ಲಿ ಎರಡು ಸಾಂಗ್ ಶೂಟಿಂಗ್ ನಡೆಸಿ, ಚಿತ್ರತಂಡ ಸ್ಪೇನ್ ಗೆ ಹಾರಲಿದೆ. ಅಲ್ಲಿ ಹಾಡಿನ ಶೂಟಿಂಗ್ ಪೂರ್ಣಗೊಳಿಸುವ ಯೋಚನೆ ಚಿತ್ರತಂಡಕ್ಕೆ ಇದೆ ಎಂದು ಹೇಳಲಾಗಿದೆ.

ದರ್ಶನ್ ಜೊತೆಗೆ ‘ಜಗ್ಗುದಾದಾ’ ಸಿನಿಮಾದಲ್ಲಿ ದೀಕ್ಷಾ, ಸೃಜನ್ ಲೋಕೇಶ್, ಗಾಯತ್ರಿ ಅಯ್ಯರ್, ವಿಶಾಲ್ ಹೆಗ್ಡೆ ಮೊದಲಾದವರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಮತ್ತೊಂದು ಪ್ರಮುಖ ಸಂಗತಿಯೆಂದರೆ ‘ಬುಲ್ ಬುಲ್’ನಲ್ಲಿ ದರ್ಶನ್ ಜೊತೆಗೆ ನಟಿಸಿದ್ದ ರಚಿತಾ ರಾಮ್ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...