alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಕ್ರವರ್ತಿ’ ಅಬ್ಬರ : ಮಧ್ಯರಾತ್ರಿಯೇ ಮುಗಿಬಿದ್ದ ಫ್ಯಾನ್ಸ್

img-20170413-wa0051

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಮಧ್ಯರಾತ್ರಿಯೇ ಪ್ರದರ್ಶನ ಆರಂಭವಾಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ.

ಬೆಂಗಳೂರು, ಮೈಸೂರು, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಮಧ್ಯರಾತ್ರಿಯೇ ಮೊದಲ ಶೋ ಆರಂಭವಾಗಿದೆ. ಥಿಯೇಟರ್ ಗಳ ಬಳಿ ಜಮಾಯಿಸಿದ್ದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಥಿಯೇಟರ್ ಒಳಗೂ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು.

ಶಿವಮೊಗ್ಗದ ವೀರಭದ್ರೇಶ್ವರ ಚಿತ್ರ ಮಂದಿರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮೈಸೂರಿನ ಮಲ್ಟಿಫ್ಲೆಕ್ಸ್ ನಲ್ಲಿ ರಾತ್ರಿಯೇ ಪ್ರದರ್ಶನ ಕಂಡಿರುವುದು ದಾಖಲೆಯಾಗಿದೆ.

ಬೆಂಗಳೂರು ಉತ್ತರಹಳ್ಳಿಯ ಚಿತ್ರಮಂದಿರದಲ್ಲಿ ನಿರಂತರವಾಗಿ 8 ಪ್ರದರ್ಶನ ಕಾಣಲಿದೆ. ರಾಜ್ಯ ಮಾತ್ರವಲ್ಲದೇ, ಹೊರ ರಾಜ್ಯಗಳಲ್ಲಿಯೂ ‘ಚಕ್ರವರ್ತಿ’ ಅಬ್ಬರ ಜೋರಾಗಿದೆ.

ಮಧ್ಯರಾತ್ರಿಯಲ್ಲಿಯೂ ಹಬ್ಬದ ವಾತಾವರಣ ಉಂಟಾಗಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ‘ಚಕ್ರವರ್ತಿ’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...