alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ತಾಗಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನ್ಯೂ ಸ್ಟೈಲ್

darshan 77

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿರುವ ‘ಹೆಬ್ಬುಲಿ’ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ಸುದೀಪ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಅವರ ಹೇರ್ ಸ್ಟೈಲ್ ಯುವಕರನ್ನು ಮೋಡಿ ಮಾಡಿತ್ತು.

ಡಿಫರೆಂಟ್ ಹೇರ್ ಸ್ಟೈಲ್ ನಲ್ಲಿ ಕಿಚ್ಚ ಹೊಸ ಕಮಾಲ್ ಮಾಡಿದಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಟ್ರೆಂಡ್ ಸೃಷ್ಠಿಸಲಿದ್ದಾರೆ. ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಚಕ್ರವರ್ತಿ’ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ‘ಚಕ್ರವರ್ತಿ’ಯಲ್ಲಿ ದರ್ಶನ್ ಹೇರ್ ಸ್ಟೈಲ್ ವಿಭಿನ್ನವಾಗಿದೆ. ಕಪ್ಪು ಕೂದಲನ್ನು ಕೆಂಚು ಕೂದಲಾಗಿ ಬದಲಿಸಿಕೊಂಡಿರುವ ದರ್ಶನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿಂತನ್ ನಿರ್ದೇಶನದ ‘ಚಕ್ರವರ್ತಿ’ಯಲ್ಲಿ ದರ್ಶನ್ 2 ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದು, ಹಳೆ ಮತ್ತು ಹೊಸ ಹೇರ್ ಸ್ಟೈಲ್ ಅಭಿಮಾನಿಗಳನ್ನು ಸೆಳೆಯುವುದಂತೂ ಗ್ಯಾರಂಟಿ. ದರ್ಶನ್ ಅವರೊಂದಿಗೆ ಆದಿತ್ಯ, ಸೃಜನ್ ಲೋಕೇಶ್, ದಿನಕರ್ ತೂಗುದೀಪ, ದೀಪಾ ಸನ್ನಿಧಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಮಲೇಷ್ಯಾದಲ್ಲಿ ಚಿತ್ರೀಕರಣ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...