alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಗೆ ಸಜ್ಜಾದ ದರ್ಶನ್ ‘ಚಕ್ರವರ್ತಿ’

rel-darshan

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಇದೇ ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.

ದರ್ಶನ್ ಅಭಿಮಾನಿಗಳು ಈಗಾಗಲೇ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಬೆಂಗಳೂರು ಉತ್ತರಹಳ್ಳಿಯ ವೈಷ್ಣವಿ ಟಾಕೀಸ್ ನಲ್ಲಿ ಈಗಾಗಲೇ ಮೊದಲ 2 ಪ್ರದರ್ಶನದ ಟಿಕೆಟ್ ಸೋಲ್ಡ್ ಆಗಿವೆ ಎನ್ನಲಾಗಿದೆ.

ಅಲ್ಲದೇ ಈ ಟಾಕೀಸ್ ನಲ್ಲಿ ರಿಲೀಸ್ ದಿನ ‘ಚಕ್ರವರ್ತಿ’ 8 ಪ್ರದರ್ಶನ ಕಾಣಲಿದೆ. ಏಪ್ರಿಲ್ 13 ರಂದು ರಾತ್ರಿ 12.30 ಕ್ಕೆ ಮೊದಲ ಪ್ರದರ್ಶನವಿರುತ್ತದೆ.

14 ರ ಮಧ್ಯರಾತ್ರಿವರೆಗೆ ನಿರಂತರವಾಗಿ 8 ಪ್ರದರ್ಶನಕ್ಕೆ ‘ಚಕ್ರವರ್ತಿ’ ಸಜ್ಜಾಗಿದ್ದು, ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆಯಲಿದೆ.

‘ಚಕ್ರವರ್ತಿ’ಯಲ್ಲಿ ದರ್ಶನ್, ಆದಿತ್ಯ, ಕುಮಾರ್ ಬಂಗಾರಪ್ಪ, ದಿನಕರ್ ತೂಗುದೀಪ, ಸೃಜನ್ ಲೋಕೇಶ್ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...