alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿಯಿಂದಲೇ ‘ಚಕ್ರವರ್ತಿ’ ದರ್ಬಾರ್

ratfri

ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ದರ್ಬಾರ್ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ.

ಮಧ್ಯಾಹ್ನ ದರ್ಶನ್ ಫೇಸ್ ಬುಕ್ ಲೈವ್ ನಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಸುಮಾರು 3 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಪಾರ ಸಂಖ್ಯೆಯ ಜನ ಲೈಕ್, ಶೇರ್ ಮಾಡಿದ್ದಾರೆ.

ತಮ್ಮ ‘ಚಕ್ರವರ್ತಿ’ ಸಿನಿಮಾದ ಕುರಿತಾಗಿ ದರ್ಶನ್ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾ, ಗುರುವಾರ ಮಧ್ಯರಾತ್ರಿಯೇ ರಿಲೀಸ್ ಆಗಲಿದೆ. ಮಾತ್ರವಲ್ಲ, ಶುಕ್ರವಾರ ರಾತ್ರಿವರೆಗೆ ನಿರಂತರವಾಗಿ 8 ಪ್ರದರ್ಶನಗಳನ್ನು ಕಾಣಲಿದೆ.

ಬೆಂಗಳೂರು ಉತ್ತರಹಳ್ಳಿಯ ಚಿತ್ರಮಂದಿರವೊಂದರಲ್ಲಿ 8 ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆ.

ರಾಜ್ಯದ ಅನೇಕ ಕಡೆಗಳಲ್ಲಿ ರಾತ್ರಿ, ಬೆಳಗಿನ ಜಾವ ‘ಚಕ್ರವರ್ತಿ’ ಮೊದಲ ಪ್ರದರ್ಶನ ಆರಂಭವಾಗಲಿದ್ದು, ಅಭಿಮಾನಿಗಳು ಚಿತ್ರ ಮಂದಿರಗಳನ್ನು ಸಿಂಗರಿಸಿದ್ದಾರೆ. ಫ್ಲೆಕ್ಸ್, ಕಟೌಟ್ ಗಳಿಂದ ಚಿತ್ರಮಂದಿರಗಳು ಕಳೆಗಟ್ಟಿವೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಚಿತ್ರಪ್ರೇಮಿಗಳೆಲ್ಲಾ ಥಿಯೇಟರ್ ನತ್ತ ಮುಖಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...