alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಅಭಿಮಾನಿಗಳಿಗೆ ‘ಚಕ್ರವರ್ತಿ’ ಕುರಿತ ಮಾಹಿತಿ

darshan cinem

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಹುದಿನಗಳ ನಂತರ ಲಾಂಗ್ ಹಿಡಿದಿದ್ದು,  ರೆಟ್ರೋ ಸ್ಟೈಲ್ ನಲ್ಲಿ ‘ಚಕ್ರವರ್ತಿ’ಯಾಗಿ ಮಿಂಚಲಿದ್ದಾರೆ. ಮೈಸೂರಿನಲ್ಲಿ ‘ಚಕ್ರವರ್ತಿ’ ಚಿತ್ರೀಕರಣ ಭರದಿಂದ ಸಾಗಿದೆ ಎನ್ನಲಾಗಿದೆ.

80 ರ ದಶಕದ ಚಿತ್ರಕತೆ ಇದಾಗಿದ್ದು, ದರ್ಶನ್ ಬೆಲ್ ಬಾಟಮ್ ಪ್ಯಾಂಟ್, ಚೆಕ್ಸ್ ಶರ್ಟ್ ನಲ್ಲಿ ಹಳೇ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹುಚ್ಚೆಬ್ಬಿಸುವುದಂತೂ ಗ್ಯಾರಂಟಿ. ಸಾಲು, ಸಾಲು ಹಿಟ್ ಚಿತ್ರಗಳನ್ನು ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ದರ್ಶನ್ ‘ಚಕ್ರವರ್ತಿ’ಯಲ್ಲಿ ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಚಿಂತನ್ ನಿರ್ದೇಶನ ಮಾಡಿದ್ದಾರೆ. ದೀಪಾ ಸನ್ನಿಧಿ, ಸೃಜನ್ ಲೋಕೇಶ್ ಮೊದಲಾದವರು ನಟಿಸಿದ್ದಾರೆ.

ತೆರೆಯ ಹಿಂದೆ ನಿರ್ದೇಶಕ, ನಿರ್ಮಾಪಕರಾಗಿದ್ದ ದರ್ಶನ್ ಸಹೋದರ ದಿನಕರ್ ತೂಗುದೀಪ, ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಗೆ ಈ ಚಿತ್ರ ರಸದೌತಣ ನೀಡಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...