alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

darshan-dar

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ.

ದರ್ಶನ್ ಅಭಿನಯದ, ಚಿಂತನ್ ನಿರ್ದೇಶನದ ‘ಚಕ್ರವರ್ತಿ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು, ಅನೇಕ ಕಾರಣಗಳಿಂದ ಚಿತ್ರ ಗಮನ ಸೆಳೆದಿದೆ. ದರ್ಶನ್ ಸಹೋದರ ದಿನಕರ್ ತೂಗುದೀಪ ಈ ಚಿತ್ರದಲ್ಲಿ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ದರ್ಶನ್ ಸಹೋದರಿಯ ಪುತ್ರ ಮನೋಜ್ ಕೂಡ ಅಭಿನಯಿಸಿದ್ದು, ಆದಿತ್ಯ, ಕುಮಾರ್ ಬಂಗಾರಪ್ಪ, ದೀಪಾ ಸನ್ನಿಧಿ, ಸೃಜನ್ ಲೋಕೇಶ್ ಮೊದಲಾದವರು ಅಭಿನಯಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಈ ಚಿತ್ರ ರಸದೌತಣ ನೀಡುವುದಂತೂ ಗ್ಯಾರಂಟಿ. ರೆಟ್ರೋ ಲುಕ್ ನಲ್ಲಿ 2 ವಿಭಿನ್ನ ಗೆಟಪ್ ಗಳಲ್ಲಿ ದರ್ಶನ್ ಮಿಂಚಿದ್ದಾರೆ.

ಡಾನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. 80 ರ ದಶಕದ ಕಥಾಹಂದರ ಒಳಗೊಂಡಿರುವ ‘ಚಕ್ರವರ್ತಿ’ಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...