alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಕ್ರವರ್ತಿ’ ದರ್ಬಾರ್ ಗೆ ಶುರುವಾಯ್ತು ಕೌಂಟ್ ಡೌನ್

da-resl

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಸಿನಿಪ್ರಿಯರು ಭಾರೀ ಕುತೂಹಲದಿಂದ ಕಾಯುತ್ತಿರುವ ‘ಚಕ್ರವರ್ತಿ’ ಆಗಮನಕ್ಕೆ ಕೌಂಟ್ ಡೌನ್ ಶುರುವಾಗಿದೆ.

ದರ್ಶನ್ 3 ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿರುವ ‘ಚಕ್ರವರ್ತಿ’ ದೇಶಾದ್ಯಂತ ಸುಮಾರು 500 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಗುರುವಾರ ರಾತ್ರಿಯಿಂದಲೇ ಚಿತ್ರ ಪ್ರದರ್ಶನಕ್ಕೆ ಕೆಲವೆಡೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಚಿತ್ರ ಮಂದಿರವೊಂದರಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿವರೆಗೆ ನಿರಂತರವಾಗಿ 8 ಪ್ರದರ್ಶನ ನಡೆಯಲಿದೆ.

ಇನ್ನು ಮೊದಲ ದಿನ ಮೊದಲ ಶೋ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಈಗಾಗಲೇ ಅನೇಕ ಕಡೆಗಳಲ್ಲಿ ಮೊದಲ ಮತ್ತು 2 ನೇ ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗಿವೆ. ದರ್ಶನ್ ಫ್ಯಾನ್ಸ್ ಗಳಿಗಂತೂ ಹಬ್ಬವಾಗಿದ್ದು, ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಚಿಂತನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ದರ್ಶನ್ ಅವರೊಂದಿಗೆ ಆದಿತ್ಯ, ದೀಪಾ ಸನ್ನಿಧಿ, ಕುಮಾರ್ ಬಂಗಾರಪ್ಪ, ದಿನಕರ್ ತೂಗುದೀಪ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...