alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ದರ್ಶನ್ 51 ನೇ ಚಿತ್ರ ಲೇಟಾದ ರಹಸ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೇ ಅಭಿಮಾನಿಗಳು ಮಾತ್ರವಲ್ಲ, ಗಾಂಧಿನಗರವೇ ತಿರುಗಿ ನೋಡುತ್ತೆ. ದರ್ಶನ್ 50 ನೇ ಚಿತ್ರ ‘ಕುರುಕ್ಷೇತ್ರ’ ಬಳಿಕ 51 ನೇ ಸಿನಿಮಾ ಯಾವುದು? ಯಾವಾಗ ಆರಂಭವಾಗುತ್ತೆ ಎನ್ನುವ ಕುತೂಹಲ ಹೆಚ್ಚಾಗಿದೆ.

ವರ್ಷಕ್ಕೆ ದರ್ಶನ್ ಅವರ 2 ಚಿತ್ರಗಳಾದರೂ ಬಿಡುಗಡೆಯಾಗಲಿ ಎಂಬುದು ಅಭಿಮಾನಿಗಳ ಬಯಕೆಯಾಗಿದೆ. ಇವೇ ಮೊದಲಾದ ಕಾರಣಕ್ಕೆ ದರ್ಶನ್ ಇತ್ತೀಚೆಗೆ 1 ಚಿತ್ರಕ್ಕೆ 65 ದಿನ, ಹೆಚ್ಚುವರಿಯಾಗಿ 5 ದಿನ ಕಾಲ್ ಶೀಟ್ ಕೊಡುವುದಾಗಿ ಹೇಳಿದ್ದರು.

ಆದರೆ, ದರ್ಶನ್ ಅವರ 51 ನೇ ಚಿತ್ರ ವಿಳಂಬವಾಗಲು ಕಾರಣವೇನು ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ‘ಕುರುಕ್ಷೇತ್ರ’ ಶೂಟಿಂಗ್ ಲೇಟಾಗಿದೆ. ಇದರೊಂದಿಗೆ ದರ್ಶನ್ ‘ಕುರುಕ್ಷೇತ್ರ’ಕ್ಕಾಗಿ ಮೀಸೆ ತೆಗೆಸಿದ್ದಾರೆ. ಹೇರ್ ಸ್ಟೈಲ್ ಕೂಡ ಬದಲಾಗಿದೆ. ಅವರು ನಾರ್ಮಲ್ ಸ್ಟೈಲ್ ಗೆ ಮರಳಿದ ಬಳಿಕ 51 ನೇ ಸಿನಿಮಾ ಸೆಟ್ಟೇರಲಿದೆ.

ಸಂಕ್ರಾಂತಿಗೆ ದರ್ಶನ್ ಫ್ಯಾನ್ಸ್ ಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ‘ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ ಮಂದಣ್ಣ ದರ್ಶನ್ ಅವರ 51 ನೇ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ. ನಿರ್ಮಾಪಕ ನಿರ್ದೇಶಕ ಬಿ. ಸುರೇಶ್ ಅವರು ರೆಡಿ ಮಾಡಿದ್ದ ಕತೆಗೆ ಕಮರ್ಷಿಯಲ್ ಟಚ್ ನೀಡಲಾಗಿದೆ. ನಿರ್ದೇಶಕ ಪಿ. ಕುಮಾರ್ ಈಗಾಗಲೇ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಸಂಕ್ರಾಂತಿಗೆ ಸಿನಿಮಾ ಸೆಟ್ಟೇರಲಿದ್ದು, ನಂತರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...