alex Certify
ಕನ್ನಡ ದುನಿಯಾ       Mobile App
       

Kannada Duniya

‘ವಿರಾಟ್’ ದರ್ಶನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್

viraat darsha

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ದಿನದಿಂದ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಗಳಿಕೆಯಲ್ಲೂ ದಾಖಲೆ ಬರೆದಿದೆ.

‘ವಿರಾಟ್’ ಮೊದಲ ವಾರದ ಗಳಿಕೆ ಬರೋಬ್ಬರಿ ರೂ.12 ಕೋಟಿ. ಎರಡನೇ ವಾರದಲ್ಲೂ ಭರ್ಜರಿ ಕಲೆಕ್ಷನ್ ಆಗುತ್ತಿದ್ದು, ಮೊದಲ ವಾರಕ್ಕಿಂತ ಎರಡನೇ ವಾರಕ್ಕೆ ಗಳಿಕೆ ಹೆಚ್ಚಲಿದೆ ಎನ್ನಲಾಗಿದೆ. ಈ ಮೂಲಕ ದರ್ಶನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ಅಲ್ಲದೇ, ದರ್ಶನ್ ಮೊದಲ ಬಾರಿಗೆ ಸ್ಟೈಲಿಶ್ ಬ್ಯುಸಿನೆಸ್ ಮೆನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೂವರು ನಾಯಕಿಯರಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಪಕ ಸಿ. ಕಲ್ಯಾಣ್ ಅವರು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಹೆಚ್. ವಾಸು ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ದರ್ಶನ್ ಅವರ ‘ಭಗವಾನ್’, ‘ಇಂದ್ರ’ ಸೇರಿದಂತೆ 3 ಚಿತ್ರಗಳನ್ನು ವಾಸು ನಿರ್ದೇಶನ ಮಾಡಿದ್ದಾರೆ. ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ‘ವಿರಾಟ್’ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಎರಡನೇ ವಾರದಲ್ಲೂ ವೀರಾವೇಶದಲ್ಲಿ ಮುನ್ನುಗ್ಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...