alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಕಾರು ಖರೀದಿಸಿದ ದರ್ಶನ್

ಕಳೆದ ತಿಂಗಳು ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಹೊಸ ವಾಹನ ಖರೀದಿಸಿದ್ದಾರೆ. ದರ್ಶನ್ ಅವರು ನಾನಾ ರೀತಿಯ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಹೊಸದಾಗಿ ಜಿಪ್ಸಿ ಖರೀದಿಸಿದ್ದಾರೆ.

ದರ್ಶನ್ ಅವರ ಬಳಿ ಲ್ಯಾಂಬೋರ್ಗಿನಿ, ಬಿ.ಎಂ.ಡಬ್ಲ್ಯೂ., ರೇಂಜ್ ರೋವರ್, ಜಾಗ್ವಾರ್, ಫಾರ್ಚೂನರ್ ಮೊದಲಾದ ಕಾರುಗಳಿವೆ. ದರ್ಶನ್ ಅವರೇ ಕಾರು ಚಾಲನೆ ಮಾಡುತ್ತಾರೆ. ಇತ್ತೀಚೆಗೆ ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರನ್ನು ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದ್ದರು. ಅಭಿಮಾನಿಗಳು, ಪೊಲೀಸರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು.

ದರ್ಶನ್ ಅಭಿನಯದ ‘ಯಜಮಾನ’ ಚಿತ್ರೀಕರಣ ನಡೆಯುತ್ತಿದೆ. ‘ಕುರುಕ್ಷೇತ್ರ’ ಬಿಡುಗಡೆಗೆ ಸಿದ್ಧವಾಗ್ತಿದೆ. ಅದ್ಧೂರಿ ವೆಚ್ಚದಲ್ಲಿ, ಬಹುತಾರಾಗಣದಲ್ಲಿ ನಿರ್ಮಾಣವಾಗ್ತಿರುವ ‘ಕುರುಕ್ಷೇತ್ರ’ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...