alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಹುಟ್ಟುಹಬ್ಬದಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಸ್ಯಾಂಡಲ್ ವುಡ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 41 ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ರಾತ್ರಿಯಿಂದಲೇ ದರ್ಶನ್ ನಿವಾಸದ ಬಳಿ ನೆರೆದಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೆಚ್ಚಿನ ನಟನಿಗೆ ಶುಭಾಶಯ ಕೋರಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಅಭಿಮಾನಿಗಳು ಸಂಭ್ರಮದಿಂದ ಶುಭಾಶಯ ಕೋರಿದ್ದಾರೆ.

ತಾವು ತಂದಿದ್ದ ಕೇಕ್ ಕತ್ತರಿಸಿ, ಹಾರ ಹಾಕಿ ಘೋಷಣೆ ಕೂಗಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿದ್ದಲ್ಲದೇ, ಫೋಟೋ, ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

ಅಭಿಮಾನಿಗಳನ್ನು ಕಂಡು ಸಂತಸಗೊಂಡ ದರ್ಶನ್ ಎಲ್ಲರೊಂದಿಗೆ ಮಾತನಾಡಿದ್ದಾರೆ. ಧನ್ಯವಾದ ಹೇಳಿದ್ದಾರೆ. ಈ ಬಾರಿ ದರ್ಶನ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು, ಅಭಿಮಾನಿಗಳು 15 ದಿನ ಮೊದಲೇ ತಯಾರಿ ನಡೆಸಿ, ಡಿ ಬಾಸ್ ಉತ್ಸವ ಅದ್ಧೂರಿಯಾಗಿ ಆಯೋಜಿಸಿದ್ದಾರೆ.

ನಟ ಸೃಜನ್ ಲೋಕೇಶ್, ವಿನೋದ್ ಸೇರಿದಂತೆ ಹಲವರು ಬೆಳಿಗ್ಗೆಯೇ ದರ್ಶನ್ ನಿವಾಸಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ. ದರ್ಶನ್ ನಿವಾಸದ ಬಳಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...