alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

actor-darshan

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಜಗ್ಗುದಾದಾ’ ಸಿನಿಮಾ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ನಡುವೆ ದರ್ಶನ್ ಹಾಗೂ ಅವರ ಸ್ನೇಹಿತರು ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ.

ದರ್ಶನ್, ಅವರ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ, ಲಾಲಿ ವಾಸು, ಶಿವಮಣಿ, ಎಂ.ಡಿ. ಶ್ರೀಧರ್ ಮೊದಲಾದವರು ಬೆಂಗಳೂರಿನ ಶ್ರೀರಾಮಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪನ ಮಾಲೆ ಧರಿಸಿದ್ದಾರೆ. ಒಂದು ವಾರ ವ್ರತ ಆಚರಿಸಲಿದ್ದಾರೆ. ಮುಂದಿನ ವಾರ ಇವರೆಲ್ಲರೊಂದಿಗೆ ಇನ್ನಷ್ಟು ಮಂದಿ ಸೇರ್ಪಡೆಯಾಗಲಿದ್ದು, ಸುಮಾರು 40 ಮಂದಿಯ ತಂಡ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೊರಡಲಿದೆ.

‘ಜಗ್ಗುದಾದಾ’ ಆಡಿಯೋ ರಿಲೀಸ್ ಆಗಿ ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಸೃಷ್ಠಿಸಿದ್ದು, ಪ್ರೇಕ್ಷಕರು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ರಾಘವೇಂದ್ರ ಹೆಗಡೆ ನಿರ್ಮಾಣ, ನಿರ್ದೇಶನ ಮಾಡಿದ್ದು, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...