alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಕುರಿತಾಗಿ ಈ ಸಿಂಗರ್ ಹೇಳಿದ್ದೇನು ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ತಾರಕ್’ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ದರ್ಶನ್ ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿದ್ದು, ಅವರ ಚಿತ್ರಗಳು ಭರ್ಜರಿ ಓಪನ್ ಪಡೆದುಕೊಳ್ಳುತ್ತವೆ.

ದರ್ಶನ್ ಕುರಿತಾಗಿ ಬಾಲಿವುಡ್ ಸಿಂಗರ್ ಅರ್ಮಾನ್ ಮಲಿಕ್ ಇಂತಹ ಹೇಳಿಕೆ ನೀಡಿದ್ದಾರೆ. ‘ಮುಂಗಾರು ಮಳೆ -2’ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಅರ್ಮಾನ್ ಮಲಿಕ್ ಹಾಡಿದ್ದಾರೆ.

ದರ್ಶನ್ ಅಭಿನಯದ ‘ಚಕ್ರವರ್ತಿ’ಯಲ್ಲಿ ಅವರು ಹಾಡಿದ್ದ ‘ಒಂದು ಮಳೆ ಬಿಲ್ಲು…’ ಹಾಡು ಸಖತ್ ಹಿಟ್ ಆಗಿತ್ತು. ‘ತಾರಕ್’ನಲ್ಲಿಯೂ ಅರ್ಮಾನ್ ಹಾಡಿದ್ದಾರೆ.

ದರ್ಶನ್ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ನಾನು ಅವರ ಚಿತ್ರಗಳಿಗೆ ಹಾಡಿದ ಬಳಿಕ ಅವರ ಅಭಿಮಾನಿಗಳು ನನ್ನನ್ನೂ ಇಷ್ಟಪಟ್ಟಿದ್ದು, ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ದರ್ಶನ್ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಅರ್ಮಾನ್ ಮಲಿಕ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...