alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಅರ್ಜುನ್ ಸರ್ಜಾ ಅವರಿಗೂ ವಂಚಿಸಿದ್ದಾನೆ ಮಲ್ಲಿಕಾರ್ಜುನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆಪ್ತನಾಗಿದ್ದ ಮಲ್ಲಿಕಾರ್ಜುನ್ ನಾಪತ್ತೆಯಾದ ಬಳಿಕ ಆತನ ಒಂದೊಂದೇ ವಂಚನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೂ ಮಲ್ಲಿಕಾರ್ಜುನ್ ಕೋಟ್ಯಾಂತರ ರೂಪಾಯಿ ವಂಚಿಸಿರುವ ಸಂಗತಿ ಈಗ ಬಯಲಾಗಿದೆ.

ಅರ್ಜುನ್ ಸರ್ಜಾ ಅವರು ತಮ್ಮ ನಿರ್ದೇಶನದ ‘ಪ್ರೇಮ ಬರಹ’ ಚಲನಚಿತ್ರದ ವಿತರಣೆಯನ್ನು ಮಲ್ಲಿಕಾರ್ಜುನ್ ಗೆ ನೀಡಿದ್ದರೆಂದು ಹೇಳಲಾಗಿದ್ದು, ಆತ ನಯಾ ಪೈಸೆಯನ್ನೂ ನೀಡದೆ ವಂಚಿಸಿದ್ದಾನೆಂದು ತಿಳಿದು ಬಂದಿದೆ.

ನಟ ದರ್ಶನ್ ಕೂಡಾ ಮಲ್ಲಿಕಾರ್ಜುನ್ ಮಾಡಿರುವ ವಂಚನೆಯನ್ನು ಅರಿತು ಬೇಸರಗೊಂಡಿದ್ದು, ದರ್ಶನ್ ಜೊತೆಗೆ ಆತ್ಮೀಯತೆ ಹೊಂದಿರುವ ಅರ್ಜುನ್ ಸರ್ಜಾ ಅವರು ಈ ಕಾರಣಕ್ಕಾಗಿಯೇ ಮಲ್ಲಿಕಾರ್ಜುನ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿಲ್ಲವೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...