alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಇಂತಹ ಚಾಲೆಂಜ್ ಸ್ವೀಕರಿಸಿದ್ದೇಕೆ..?

darshan-dd-k

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಚಿತ್ರದ ಆರಂಭದಿಂದಲೂ ಬಿಡುಗಡೆಯಾಗುವವರೆಗೂ ಕುತೂಹಲದಿಂದ ಕಾಯುತ್ತಾರೆ.

ನೆಗೆಟಿವ್ ರೋಲ್ ಗಳಲ್ಲಿ ಕಾಣಿಸಿಕೊಳ್ಳಲು ಕೆಲವರು ಹಿಂದೇಟು ಹಾಕ್ತಾರೆ. ಆದರೆ, ದರ್ಶನ್ ಅಂತಹ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯಗೆದ್ದ ವರನಟ ಡಾ. ರಾಜ್ ಕುಮಾರ್ ‘ದಾರಿ ತಪ್ಪಿದ ಮಗ’, ‘ಭಕ್ತ ಪ್ರಹ್ಲಾದ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸವಾಲಿನ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ದರ್ಶನ್ ಕೂಡ ‘ನವಗ್ರಹ’ದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಅವರ ಮುಂದಿನ ಚಿತ್ರ ‘ಕುರುಕ್ಷೇತ್ರ’ದಲ್ಲಿ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸುವುದು ಕಲಾವಿದರಿಗೆ ಸವಾಲಿನ ಕೆಲಸ. ಅಂತಹ ಪಾತ್ರಗಳಿಗೆ ಅಣ್ಣಾವ್ರು ಜೀವ ತುಂಬುತ್ತಿದ್ದರು. ಇದೀಗ ದರ್ಶನ್ ಅಂತಹ ಸವಾಲಿನ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ.

ದರ್ಶನ್ ‘ಕುರುಕ್ಷೇತ್ರ’ದ ದುರ್ಯೋಧನನ ಪಾತ್ರಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ರಾಜ್ ಅವರ ಪೌರಾಣಿಕ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಕೌರವ ಅಧಿಪತಿಯಾಗಿ ಕಾಣಿಸಿಕೊಳ್ಳಲು ಬೇಕಾದ ಎಲ್ಲಾ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...