alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟವಶಾತ್ ಬದುಕುಳಿದ ದಂಗಲ್ ಗರ್ಲ್

zaira_accident1024_1497089951_749x421

ದಂಗಲ್ ಚಿತ್ರದ ಮೂಲಕ ಎಲ್ಲರ ಮನಸ್ಸು ಗೆದ್ದಿರುವ ನಟಿ ಜೈರಾ ವಾಸೀಂ ಅದೃಷ್ಟ ಚೆನ್ನಾಗಿತ್ತು. ಗುರುವಾರ ಜೈರಾ ವಾಸೀಂ ಕಾರು ಅಪಘಾತಕ್ಕೀಡಾಗಿದೆ. ಜೈರಾ, ಸ್ನೇಹಿತರ ಜೊತೆ ಕಾಶ್ಮೀರದ ದಾಲ್ ಸರೋವರದ ಬಳಿ ಸುತ್ತಾಡುತ್ತಿದ್ದ ವೇಳೆ ಏಕಾಏಕಿ ಕಾರು ದಾಲ್ ಸರೋವರಕ್ಕೆ ಬಿದ್ದಿದೆ. ತಕ್ಷಣ ಸ್ಥಳೀಯರು ನೆರವಿಗೆ ಬಂದಿದ್ದಾರೆ. ಸರೋವರಕ್ಕೆ ಬಿದ್ದ ಜೈರಾ ವಾಸೀಂ ಹಾಗೂ ಸ್ನೇಹಿತರನ್ನು ರಕ್ಷಿಸಿದ್ದಾರೆ.

ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಜೈರಾ ವಾಸೀಂ ಗುರುವಾರ ಈ ಘಟನೆ ನಡೆದಿತ್ತು. ಅದೃಷ್ಟವಶಾತ್ ಬದುಕುಳಿದಿದ್ದೇನೆ ಎಂದಿದ್ದಾಳೆ.  ಜೈರಾ, ರಕ್ಷಣೆ ಮಾಡಿದ ಸ್ಥಳೀಯರಿಗೆ ಧನ್ಯವಾದ ಹೇಳಿದ್ದಾಳೆ.

ಈ ವರ್ಷ ಜನವರಿಯಲ್ಲಿ ಜೈರಾ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭೇಟಿ ಮಾಡಿ ವಿವಾದಕ್ಕೆ ಸಿಲುಕಿದ್ದಳು. ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಜೈರಾ ಕ್ಷಮೆ ಕೇಳಬೇಕೆಂದು ಕೆಲವರು ಹೇಳಿದ್ದರೆ ಮತ್ತೆ ಕೆಲವರು ಕ್ಷಮೆ ಕೇಳುವ ಅಗತ್ಯವಿಲ್ಲ ಎಂದಿದ್ದರು. ಬಾಲಿವುಡ್ ನಟ ಅಮೀರ್ ಖಾನ್ ಸೇರಿದಂತೆ ಅನೇಕರು ಜೈರಾ ಬೆಂಬಲಕ್ಕೆ ನಿಂತಿದ್ದರು. ಈ ಮಧ್ಯೆ ಜೈರಾ ಜನರ ಕ್ಷಮೆ ಕೇಳಿದ್ದಲ್ಲದೆ ನಾನು ಯಾರಿಗೂ ಆದರ್ಶವಲ್ಲ ಎಂದು ಸ್ಪಷ್ಟಪಡಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...