alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ಮತ್ತೆ ‘ಡಾನ್ಸಿಂಗ್ ಅಂಕಲ್’ ಸದ್ದು…!

ಬಾಲಿವುಡ್ ನಟ ಗೋವಿಂದ ಅಭಿನಯದ ಹಾಡಿಗೆ ಸ್ಟೆಪ್ಸ್ ಹಾಕಿ ಒಂದೇ ರಾತ್ರಿಯಲ್ಲಿ ಖ್ಯಾತಿ ಪಡೆದಿದ್ದ, ಡ್ಯಾನ್ಸಿಂಗ್ ಅಂಕಲ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಂಜೀವ್ ಶ್ರೀವಾತ್ಸವ್ ಸದ್ಯ ಸಾಮಾಜಿಕ ತಾಣಗಳಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ.

ಸಂಜೀವ್ ಈ ಬಾರಿ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ರ ಚಿತ್ರದ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಹೃತಿಕ್ ಅಭಿನಯದ ಮೊದಲ ಚಿತ್ರ ‘ಕಹೋನಾ ಪ್ಯಾರ್ ಹೈ’ ಟೈಟಲ್ ಸಾಂಗ್ ಗೆ ಸಂಜೀವ್ ಹೆಜ್ಜೆ ಹಾಕಿದ್ದಾರೆ. ಹೃತಿಕ್ ಚಿತ್ರದಲ್ಲಿ ಕುಣಿದಿರುವಂತೆ, ಅಂಕಲ್ ಹೆಜ್ಜೆ ಹಾಕಿದ್ದಾರೆ. ಸದ್ಯ ಸಂಜೀವ್ ಅವರ ನೃತ್ಯದ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡ್ತಾ ಇದೆ.

ಭೋಪಾಲ್ ನ ವಿದಿಶಾ ನಗರದ ವಾಸಿಯಾಗಿರುವ ಸಂಜೀವ್ ರ ಜನಪ್ರಿಯತೆ ಮನಗಂಡ ವಿದಿಶಾ ಅಭಿವೃದ್ದಿ ನಿಗಮ ಅವರನ್ನು ತನ್ನ ರಾಯಭಾರಿಯಾಗಿ ಆಯ್ಕೆ ಮಾಡಿದೆ. ಈ ಮೊದಲು ಗ್ವಾಲಿಯರ್ ನಲ್ಲಿ ತಮ್ಮ ಅಳಿಯನ ಮದುವೆಯಲ್ಲಿ ಹೆಜ್ಜೆ ಹಾಕಿದ್ದ ಸಂಜೀವ್ ರ ವಿಡಿಯೋವನ್ನು ಸಿಎಂ ಶಿವರಾಜ್ ಸಿಂಗ್ ಚವಾಣ್ ಶೇರ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...