alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ವಿಡಿಯೋ ಕುರಿತು ಡಾನ್ಸ್ ಅಂಕಲ್ ಹೇಳಿದ್ದೇನು?

ಮಧ್ಯಪ್ರದೇಶದ ಭೋಪಾಲ್ ನಿವಾಸಿ ಪ್ರೊಫೆಸರ್ ಸಂಜೀವ್ ಶ್ರೀವಾತ್ಸವ್ ಅವರ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರು ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ.

ಶ್ರೀಸಾಮಾನ್ಯರಷ್ಟೇ ಅಲ್ಲ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್, ಬಾಲಿವುಡ್ ನಟಿ ರವೀನಾ ಟಂಡನ್ ಮೊದಲಾದವರು ಕೂಡಾ ಸಂಜೀವ್ ಶ್ರೀವಾತ್ಸವ್ ಅವರ ಡಾನ್ಸ್ ಗೆ ಫಿದಾ ಆಗಿದ್ದಾರೆ.

ಇಂಟರ್ನೆಟ್ ಡಾನ್ಸಿಂಗ್ ಸ್ಟಾರ್ ಆಗಿರುವ 46 ವರ್ಷದ ಪ್ರೊಫೆಸರ್ ಸಂಜೀವ್ ಶ್ರೀವಾತ್ಸವ್ ರನ್ನು ವಿದಿಶಾ ಮುನ್ಸಿಪಲ್ ಕಾರ್ಪೋರೇಷನ್, ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದೆ.

ತಮಗೆ ದೊರೆತ ಭಾರಿ ಜನಪ್ರಿಯತೆಯಿಂದಾಗಿ ಸಂತಸಗೊಂಡಿರುವ ಸಂಜೀವ್ ಶ್ರೀವಾತ್ಸವ್ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸಂಬಂಧಿಯೊಬ್ಬರ ವಿವಾಹ ಸಂದರ್ಭದಲ್ಲಿ ತಾವು ಈ ನೃತ್ಯ ಮಾಡಿದ್ದು, ಅದನ್ನು ಯಾರು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲ ತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅವರಿಗೆ ನನ್ನದೊಂದು ಸಲಾಂ ಎಂದಿದ್ದಾರೆ.

ಬಾಲ್ಯದಲ್ಲಿ ತಾಯಿಯಿಂದ ತಾವು ನೃತ್ಯ ಕಲಿತಿದ್ದು, ನಟ ಗೋವಿಂದ ತಮ್ಮ ರೋಲ್ ಮಾಡೆಲ್ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ. ತಮ್ಮ ನೃತ್ಯಕ್ಕೆ ಈ ಪರಿಯ ಶ್ಲಾಘನೆ ಬರುತ್ತದೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಮೆಚ್ಚುಗೆ ವ್ಯಕ್ತಪಡಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...