alex Certify
ಕನ್ನಡ ದುನಿಯಾ       Mobile App
       

Kannada Duniya

‘ಡಾನ್ಸ್ ದಿವಾನೆ’ ಟ್ರೋಫಿ ಬಾಚಿಕೊಂಡ ಏಳರ ಪೋರ

ಕಳೆದ ಮೂರು ತಿಂಗಳಿನಿಂದ ದೇಶದ ಜನರನ್ನು ರಂಜಿಸಿದ್ದ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋ ಶನಿವಾರ ಅಂತ್ಯಗೊಂಡಿದ್ದು, ಜೂನಿಯರ್ಸ್ ವಿಭಾಗದಲ್ಲಿ 7 ವರ್ಷದ ಪೋರ ಅಲೋಕ್ ಶಾ ಪ್ರಶಸ್ತಿ‌ ಬಾಚಿಕೊಂಡಿದ್ದಾನೆ.

ಕೊಲ್ಕತ್ತಾ ಮೂಲದ ಅಲೋಕ್, ರಿಯಾಲಿಟಿ ಶೋ ಆರಂಭದಿಂದಲೂ ಅತ್ಯುತ್ತಮ ನೃತ್ಯದ ಮೂಲಕ ತನ್ನದೆ ಆದ ಛಾಪನ್ನು ಮೂಡಿಸಿದ್ದ. ಪ್ರಮುಖವಾಗಿ ತಲೆಯನ್ನು ತಿರುಗಿಸುವ ಕಲೆಯನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸುವಲ್ಲಿ ಯಶ ಕಂಡಿದ್ದ.

ವೀಕ್ಷಕರನ್ನು ಸೆಳೆಯುವಲ್ಲಿ ಮಾತ್ರವಲ್ಲದೇ, ಹಾಲಿವುಡ್ ಮೋಹಕ‌ ತಾರೆ ಮಾಧುರಿ ದೀಕ್ಷಿತ್ ರಿಂದಲೂ ಹೊಗಳಿಕೆಯ ಮಾತನ್ನು ಪಡೆದಿದ್ದ.

ಅಶೋಕ್ ನೃತ್ಯ ಶೈಲಿಯನ್ನು ಕಂಡ ಮಾಧುರಿ, ” ಚಿಕ್ಕ ಪ್ಯಾಕೆಟ್ ನಲ್ಲಿ ದೊಡ್ಡ ಧಮಾಕ” ಹಾಗೂ “ಕ್ಯೂಟ್ ಪೈ” ಎಂದು ಹೊಗಳಿಕೆಯ ಮಾತುಗಳನ್ನು ಆಡಿದ್ದರು.

ರಿಯಾಲಿಟಿ ಶೋನಲ್ಲಿ, ಜೂನಿಯರ್ಸ್, ಸೀನಿಯರ್ಸ್ ಹಾಗೂ ಹಿರಿಯರ ವಿಭಾಗ ಎನ್ನುವ ಮೂರು ವಿಭಾಗ ಮಾಡಲಾಗಿತ್ತು. ಮಾಧುರಿ ದೀಕ್ಷಿತ್ ಅವರೊಂದಿಗೆ, ತುಷಾರ್ ಕಾಲಿಯಾ ಹಾಗೂ ಶಶಾಂಕ್ ಕೈತಾನ್ ಅವರು ಜಡ್ಜ್ ಗಳಾಗಿ ಕಾರ್ಯ ನಿರ್ವಹಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...