alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಕಲ್ ಅದೃಷ್ಟ ಬದಲಿಸ್ತು ಒಂದು ಡಾನ್ಸ್

ರಾತ್ರೋರಾತ್ರಿ ಇಂಟರ್ನೆಟ್ ನ ಸೆನ್ಸೇಷನ್  ಆಗಿರುವ ಡಬ್ಬು ಅಂಕಲ್ ಅಂದ್ರೆ ಸಂಜೀವ್ ಶ್ರೀವಾಸ್ತವ್ ಡಾನ್ಸ್ ಗೆ ದೇಶ-ವಿದೇಶಿ ಜನರು ಫಿದಾ ಆಗಿದ್ದಾರೆ. ಡಬ್ಬು ಅಂಕಲ್ ಜನಪ್ರಿಯತೆ ನೋಡಿ ಅನೇಕ ಟಿವಿ ಶೋಗಳು ಸಂಜೀವ್ ಗೆ ಆಫರ್ ನೀಡ್ತಿವೆ ಎನ್ನಲಾಗಿದೆ.

ಭಾನುವಾರವೇ ಡಬ್ಬು ಅಂಕಲ್ ಮುಂಬೈಗೆ ಬಂದಿದ್ದಾರೆ. ಟಿವಿ ಶೋನಲ್ಲಿ ಪಾಲ್ಗೊಳ್ಳಲು ಬಂದಿರುವ ಆಫರ್ ಹಿನ್ನೆಲೆಯಲ್ಲಿ ಡಬ್ಬು ಮುಂಬೈಗೆ ಬಂದಿದ್ದಾರೆ ಎನ್ನಲಾಗಿದೆ. ಟಿವಿ ಶೋ ಜೊತೆಗೆ ಕೆಲ ಸ್ಟಾರ್ ಗಳು ಕೂಡ ತಮ್ಮ ಉತ್ಪನ್ನದ ಜಾಹೀರಾತು ನೀಡುವಂತೆ ಡಬ್ಬು ಅಂಕಲ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅರ್ಜುನ್ ಕಪೂರ್, ಅನುಷ್ಕಾ ಶರ್ಮಾ, ಗೋವಿಂದ ಸೇರಿದಂತೆ ಅನೇಕರು ಡಬ್ಬು ಅಂಕಲ್ ಡಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುನೀಲ್ ಶೆಟ್ಟಿ ಈಗಾಗಲೇ ಮನೆಗೆ ಕರೆಸಿ ಡಬ್ಬು ಅಂಕಲ್ ಜೊತೆ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಡಬ್ಬು ಅಂಕಲ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೊತೆಗಿರುವ ಫೋಟೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...