alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗರ ಮನಗೆದ್ದ ಬಾಲಿವುಡ್ ಚೆಲುವೆಯರಿವರು….

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಕ್ರಿಕೆಟಿಗರ ಬಗ್ಗೆ ಎಲ್ಲರಿಗೂ ಒಂಥರಾ ಕ್ರೇಝ್. ಅದರಲ್ಲೂ ಬಾಲಿವುಡ್ ಹಾಗೂ ಕ್ರಿಕೆಟಿಗರ ಮಧ್ಯೆ ನಂಟು, ಅಫೇರ್ ಜಾಸ್ತಿ. ಕ್ರಿಕೆಟಿಗರು ಮತ್ತು ಬಾಲಿವುಡ್ ಸ್ಟಾರ್ ಗಳ ಮಧ್ಯೆ ಅಫೇರ್, ಬ್ರೇಕಪ್ ಎಲ್ಲಾ ನಡೆದಿದೆ.

ವಿವಿಯನ್ ರಿಚರ್ಡ್ಸ್-ನೀನಾ ಗುಪ್ತಾ : ನಟಿ ನೀನಾ ಗುಪ್ತಾ ಹಾಗೂ ವಿವಿಯನ್ ರಿಚರ್ಡ್ಸ್ ಮಧ್ಯೆ ಅಫೇರ್ ಇತ್ತು. ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಭಾರೀ ಸುದ್ದಿ ಮಾಡಿದ್ರು. ಇವರಿಗೆ ಒಬ್ಬ ಮಗಳೂ ಇದ್ದಾಳೆ. ಆದ್ರೆ ವಿವಿಯನ್ ಹಾಗೂ ನೀನಾ ಮದುವೆ ಆಗಲೇ ಇಲ್ಲ. ಸದ್ಯ ನೀನಾ ಬೇರೆಯವರನ್ನು ವರಿಸಿದ್ದಾರೆ.

ಗ್ಯಾರಿ ಸೋಬರ್ಸ್- ಅಂಜು ಮಹೇಂದ್ರು : ವೆಸ್ಟ್ ಇಂಡೀಸ್ ಕ್ರಿಕೆಟಿಗ ಗ್ಯಾರಿ ಸೋಬರ್ಸ್, 60ರ ದಶಕದಲ್ಲಿ ಖ್ಯಾತ ನಟಿ ಅಂಜು ಮಹೇಂದ್ರು ಅವರನ್ನು ಇಷ್ಟಪಟ್ಟಿದ್ದರು. ಅಂಜುಗೆ ಕೂಡ ಗ್ಯಾರಿ ಮೇಲೆ ಲವ್ವಾಗಿತ್ತು. ಪರಸ್ಪರ ಮದುವೆಯಾಗಲು ಕೂಡ ಸೆಲೆಬ್ರಿಟಿ ಜೋಡಿ ನಿರ್ಧರಿಸಿದ್ದರು. ಆದ್ರೆ ಕಪ್ಪು ವರ್ಣೀಯರಾದ ಗ್ಯಾರಿಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಅಂಜು ಪೋಷಕರು ಒಪ್ಪದೇ ಇದ್ದಿದ್ರಿಂದ ಪ್ರೀತಿ ಮುರಿದು ಬಿದ್ದಿತ್ತು.

ರವಿ ಶಾಸ್ತ್ರಿ-ಅಮೃತಾ ಸಿಂಗ್ : ಕ್ರಿಕೆಟಿಗ ರವಿ ಶಾಸ್ತ್ರಿ ಒಂದು ಕಾಲದಲ್ಲಿ ಅಭಿಮಾನಿಗಳ ಫೇವರಿಟ್ ಆಟಗಾರನಾಗಿದ್ರು. ಸಹಜವಾಗಿಯೇ ಬಿ-ಟೌನ್ ಜೊತೆಗೆ ರವಿಗೆ ನಂಟು ಬೆಳೆದಿತ್ತು. ನಟಿ ಅಮೃತಾ ಸಿಂಗ್ ಜೊತೆಗೆ ರವಿಶಾಸ್ತ್ರಿ ಹಲವು ತಿಂಗಳು ಡೇಟಿಂಗ್ ಕೂಡ ನಡೆಸಿದ್ದರು. ಆದ್ರೆ ಅಮೃತಾ ನಂತರ ಸೈಫ್ ಅಲಿಖಾನ್ ರನ್ನು ಮದುವೆಯಾಗಿದ್ದರು.

ಇಮ್ರಾನ್ ಖಾನ್ – ಜೀನತ್ ಅಮಾನ್ : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಗೆ ಅಪಾರ ಅಭಿಮಾನಿಗಳಿದ್ರು. ಒಳ್ಳೆ ಫಾರ್ಮ್ ನಲ್ಲಿದ್ದಾಗ್ಲೇ ಇಮ್ರಾನ್ ಖಾನ್, ಬಾಲಿವುಡ್ ನಟಿ ಜೀನತ್ ಅಮಾನ್ ಜೊತೆಗೆ ಅಫೇರ್ ಇಟ್ಟುಕೊಂಡಿದ್ರು. ಆದ್ರೆ ಇವರ ಪ್ರೀತಿ ಹೆಚ್ಚು ದಿನ ಬಾಳಲಿಲ್ಲ.

ಮೊಹ್ಸಿನ್ ಖಾನ್ – ರೀನಾ ರಾಯ್ : ಬಾಲಿವುಡ್ ನಟಿ ರೀನಾ ರಾಯ್, ಪಾಕ್ ಕ್ರಿಕೆಟಿಗ ಮೊಹ್ಸಿನ್ ಖಾನ್ ರನ್ನು ಮದುವೆಯಾಗಿದ್ದರು. ತಮ್ಮ ವೃತ್ತಿ ಬದುಕನ್ನೂ ಮೊಟಕುಗೊಳಿಸಿ ಮೊಹ್ಸಿನ್ ಜೊತೆಗೆ ನೆಲೆಸಿದ್ದರು. ಆದ್ರೆ ಅಲ್ಪ ಸಮಯದಲ್ಲೇ ಅವರ ಮದುವೆ ಮುರಿದು ಬಿದ್ದಿತ್ತು.

ಸೌರವ್ ಗಂಗೂಲಿ-ನಗ್ಮಾ : ಟೀಂ ಇಂಡಿಯಾಕ್ಕೆ ಸೌರವ್ ಗಂಗೂಲಿ ಎಂಟ್ರಿ ಕೊಟ್ಟಾಗಲೇ ನಟಿ ನಗ್ಮಾ ಜೊತೆಗೆ ಅಫೇರ್ ಇದೆ ಅನ್ನೋ ಗುಸುಗುಸು ಕೇಳಿ ಬಂದಿತ್ತು. ಆದ್ರೆ ಗಂಗೂಲಿಗೆ ಆಗಲೇ ಮದುವೆ ಕೂಡ ಆಗಿದ್ದರಿಂದ ಅವರ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಮೇಲೂ ಈ ಗಾಸಿಪ್ ಪರಿಣಾಮ ಬೀರಿತ್ತು.

ಯುವರಾಜ್ ಸಿಂಗ್-ಕಿಮ್ ಶರ್ಮಾ : ಹೊಡಿ ಬಡಿ ಆಟಗಾರ ಯುವರಾಜ್ ಸಿಂಗ್ ಕಳೆದ ವರ್ಷ ನಟಿ ಹೇಜಲ್ ಕೀಚ್ ರನ್ನು ಮದುವೆಯಾಗಿದ್ದಾರೆ. ಆದ್ರೆ ಅದಕ್ಕೂ ಮುನ್ನ ಯುವಿ, ನಟಿ ಕಿಮ್ ಶರ್ಮಾ ಜೊತೆಗೆ ಡೇಟಿಂಗ್ ನಡೆಸಿದ್ದರು. ಎಷ್ಟೋ ಪಾರ್ಟಿಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಜಹೀರ್ ಖಾನ್-ಇಶಾ ಶರ್ವಾಣಿ : ಬಾಲಿವುಡ್ ನಟಿ ಇಶಾ ಶರ್ವಾಣಿ, ವೇಗದ ಬೌಲರ್ ಜಹೀರ್ ಖಾನ್ ಅವರನ್ನೇ ಕ್ಲೀನ್ ಬೋಲ್ಡ್ ಮಾಡಿದ್ದರು. ಸುಮಾರು 8 ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ನಡೆಸಿದ್ದಾರೆ. ಆದ್ರೆ ಇವರ ಪ್ರೀತಿ ಮದುವೆಯಲ್ಲಿ ಪರ್ಯಾವಸಾನವಾಗಿಲ್ಲ.

ಜಹೀರ್ ಖಾನ್-ಸಾಗರಿಕಾ ಘಾಟ್ಗೆ : ಇಶಾ ಶರ್ವಾಣಿ ಜೊತೆಗಿನ ಬ್ರೇಕಪ್ ನಂತರ ಜಹೀರ್ ಖಾನ್ ಒಂಟಿಯಾಗಿದ್ದರು. ಆದ್ರೀಗ ಜಂಟಿಯಾಗಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಜಹೀರ್ ಖಾನ್ ಹಾಗೂ ನಟಿ ಸಾಗರಿಕಾ ಘಾಟ್ಗೆ ವಿವಾಹ ನೆರವೇರಲಿದೆ.

ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ : ಇವರದ್ದು ಬಹು ಜನಪ್ರಿಯವಾಗಿರೋ ಸೆಲೆಬ್ರಿಟಿ ಜೋಡಿ. ವಿರಾಟ್-ಅನುಷ್ಕಾ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದಾರೆ. ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಅನ್ನೋ ಸುದ್ದಿ ಕೂಡ ಇತ್ತು. ಆದ್ರೆ ವಿರುಶ್ಕಾ ಈಗ್ಲೂ ಜೊತೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...