alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಶಾಂತ್ ಅಮೇಜಿಂಗ್ ದೇಹಕ್ಕೆ ಅಭಿಮಾನಿಗಳು ಫಿದಾ

ಕ್ರಿಕೆಟರ್ ಶ್ರೀಶಾಂತ್ ಅನೇಕ ದಿನಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ವಿವಾದದಿಂದ ಶ್ರೀಶಾಂತ್ ಚರ್ಚೆಗೆ ಬಂದಿಲ್ಲ. ಶ್ರೀಶಾಂತ್ ದೇಹ ಚರ್ಚೆಗೆ ಕಾರಣವಾಗಿದೆ. ಅನೇಕ ದಿನಗಳಿಂದ ಫಿಟ್ನೆಸ್ ಗೆ ಹೆಚ್ಚು ಒತ್ತು ನೀಡಿರುವ ಶ್ರೀಶಾಂತ್ ಸಾಲಿಡ್ ಬಾಡಿ ರೆಡಿ ಮಾಡಿದ್ದಾರೆ.

ಶ್ರೀಶಾಂತ್ ಸಿಕ್ಸ್ ಪ್ಯಾಕ್ ದೇಹ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡ್ತಿರುತ್ತದೆ. ಕನ್ನಡ ಚಿತ್ರ ಕೆಂಪೇಗೌಡ-2 ದಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಶಾಂತ್ ಇದಕ್ಕಾಗಿಯೇ ಇಷ್ಟೆಲ್ಲ ಕಸರತ್ತು ಮಾಡಿದ್ದಾರೆ. ಬಾಲಿವುಡ್ ಹಿರೋಗಳಿಗಿಂತ ಕಟ್ಟುಮಸ್ತಾದ ಬಾಡಿ ಬೆಳೆಸಿರುವ ಶ್ರೀಶಾಂತ್ WWE ಕುಸ್ತಿಪಟುಗಳ ರೀತಿ ಕಾಣ್ತಿದ್ದಾರೆ.

ಶ್ರೀಶಾಂತ್ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಹೊಸ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಕಠಿಣ ಅಭ್ಯಾಸ, ಅರ್ಪಣೆ, ನಿರ್ಣಯ, ಶಿಸ್ತು#@ ಜೀವನಶೈಲಿ ಎಂದು ವಿಡಿಯೋ ಜೊತೆ ಬರೆದಿದ್ದಾರೆ ಶ್ರೀಶಾಂತ್. ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಕ್ರಿಕೆಟ್ ಜೀವನ ಹಾಳಾಗಿದೆ. ಈ ಹಿಂದೆ ಬಾಲಿವುಡ್ ಚಿತ್ರಕ್ಕಾಗಿ ಶ್ರೀಶಾಂತ್ ಬಣ್ಣ ಹಚ್ಚಿದ್ದರು. ಆದ್ರೆ ಬಾಲಿವುಡ್ ನಲ್ಲಿ ಶ್ರೀಶಾಂತ್ ಯಶಸ್ಸು ಕಾಣಲಿಲ್ಲ. ಕನ್ನಡದ ಚಿತ್ರ ಶ್ರೀಶಾಂತ್ ಕೈ ಹಿಡಿಯುತ್ತಾ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...