alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸನ್ನಿಯ ಈ ಫನ್ನಿ ವಿಡಿಯೊ

ನಟಿ ಸನ್ನಿ ಲಿಯೊನ್ ಅವರ ವಿಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರೀಕರಣದ ಸ್ಥಳದಲ್ಲಿ ಸಿಬ್ಬಂದಿಯೊಬ್ಬರು ಸನ್ನಿಯ ಮೇಲೆ ರಬ್ಬರ್ ಹಾವನ್ನು ಹಾಕಿದ್ದು, ಅದು ನಿಜವಾದ ಹಾವೆಂದು ಭಾವಿಸಿದ ಸನ್ನಿ ಗಾಬರಿಯಾಗಿದ್ದಾರೆ.

ಜಾಲತಾಣಗಳಲ್ಲಿ ಇಂತಹ ವಿಡಿಯೋ, ಫೋಟೋ ಬಹುಬೇಗನೆ ವೈರಲ್ ಆಗುತ್ತದೆ. ಅದೇ ರೀತಿ ಸನ್ನಿಯ ಈ ಫನ್ನಿ ವಿಡಿಯೋ ಕೂಡ ವೈರಲ್ ಆಗಿದೆ.

ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಸನ್ನಿ ಲಿಯೊನ್ ಪುಸ್ತಕ ಓದುತ್ತಾ ಕುಳಿತಿದ್ದು, ಅವರಿಗೆ ಗೊತ್ತಾಗದಂತೆ ಸಿಬ್ಬಂದಿಯೊಬ್ಬ ರಬ್ಬರ್ ಹಾವನ್ನು ಮೈಮೇಲೆ ಹಾಕಿದ್ದಾನೆ.

ಇದರಿಂದ ಆತಂಕಗೊಂಡ ಸನ್ನಿ ಒಮ್ಮೆಲೆ ಕುರ್ಚಿಯಿಂದ ಮೇಲೆದ್ದು ಹಾವನ್ನು ಬಿಸಾಡಿದ್ದಾರೆ. ಅಲ್ಲದೇ, ಹಾವು ಎಸೆದ ಸಿಬ್ಬಂದಿಯನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ತಮಾಷೆಯ ಪ್ರಸಂಗವನ್ನು ಸೆರೆಹಿಡಿದು ಜಾಲತಾಣದಲ್ಲಿ ಹಾಕಲಾಗಿದೆ.

‘ತೇರಾ ಇಂತೇಝಾರ್’ನಲ್ಲಿ ಅರ್ಬಾಜ್ ಖಾನ್ ಅವರೊಂದಿಗೆ ಸನ್ನಿ ಅಭಿನಯಿಸಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...