alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ‘ಬಿಗ್ ಬಾಸ್’ ಮನೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ

10406516_560305570818282_7452661052309892508_n

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್-3’ ಶೋ ಅಂತಿಮ ದಿನದ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರವಿಚಂದ್ರನ್ ಎಂಟ್ರಿ ಕೊಡುವ ಮೊದಲು ಮಂಗಳವಾದ್ಯಗಳು, ನೃತ್ಯ ಕಲಾವಿದರು ಆಗಮಿಸಿದ್ದರು.

ಬಳಿಕ ರವಿಚಂದ್ರನ್ ಅವರು ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುತ್ತಲೇ ಸ್ಪರ್ಧಿಗಳಿಗೆಲ್ಲಾ ಎಲ್ಲಿಲ್ಲದ ಖುಷಿಯಾಯ್ತು. ಎಲ್ಲರೂ ರವಿಚಂದ್ರನ್ ಅವರನ್ನು ಸ್ವಾಗತಿಸಿದರು. ಈ ವೇಳೆ ರವಿಚಂದ್ರನ್ ಅವರು ಸ್ಪರ್ಧಿಗಳಿಗೆ ನೀವು 20 ಲಕ್ಷ ರೂ. ತೆಗೆದುಕೊಂಡು ಹೋದಲ್ಲಿ ಅದಕ್ಕೆ ನಾನೂ ಒಂದು ಲಕ್ಷ ಸೇರಿಸಿ ಕೊಡುತ್ತೇನೆ ಎಂದು ಹೇಳಿದರು. ಇದಕ್ಕೆ ಒಪ್ಪದ ಸ್ಪರ್ಧಿಗಳು, ಇಷ್ಟು ದೊಡ್ಡ ಮೊತ್ತದ ಹಣ ಬೇಕು ನಿಜ. ಆದರೆ, ಇಷ್ಟು ದಿನ ಮನೆಯಲ್ಲಿದ್ದು, ಕೊನೆ ಹಂತಕ್ಕೆ ಬಂದಿದ್ದೇವೆ. ಜನ ಹೇಗೆಲ್ಲಾ ತೀರ್ಪು ಕೊಟ್ಟಿದ್ದಾರೆ. ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಇದೆ ಎಂದರು.

‘ಬಿಗ್ ಬಾಸ್’ ಮನೆಯಲ್ಲಿ ನೀವು ಏನೆಲ್ಲಾ ಕಲಿತಿರಬಹುದು. ಆದರೆ, ನೀವು ನಿಮ್ಮ ಬಗ್ಗೆ ಮಾತನಾಡಿಕೊಂಡಿದ್ದಕ್ಕಿಂತ ಬೇರೆಯವರ ಬಗ್ಗೆ ಮಾತನಾಡಿದ್ದೇ ಜಾಸ್ತಿ. ಒಬ್ಬ ಹುಡುಗ, ಹುಡುಗಿ ಅಣ್ಣ- ತಂಗಿ ಎಂದರೆ ಅಲ್ಲಿಗೇ ಮುಗೀತು. ಅದರ ಬಗ್ಗೆ ಏನೂ ಮಾತನಾಡಬಾರದು. ಅಷ್ಟಕ್ಕೂ ಅವರು ಕಾಲ ಮೇಲೆ ಮಲಗಿಕೊಂಡರೆ ಅದು ಅವರ ಗ್ರಾಮರ್. ಅದನ್ನೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. ಈ ಹಿಂದೆಯೇ ರವಿಚಂದ್ರನ್ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿತ್ತಾದರೂ ಅವರು ಬಂದಿರಲಿಲ್ಲ. ಅಂತಿಮ ದಿನದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...