alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಥುನ್ ಚಕ್ರವರ್ತಿ ಮಗನಿಗೆ ಸಿಕ್ತು ನಿರೀಕ್ಷಣಾ ಜಾಮೀನು

ದೆಹಲಿ ಕೋರ್ಟ್ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಹಾಗೂ ಪತ್ನಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಶನಿವಾರ ದೆಹಲಿ ಕೋರ್ಟ್ ನ ನ್ಯಾಯಮೂರ್ತಿ ಅಶುತೋಶ್ ಕುಮಾರ್, ಮಿಥುನ್ ಮಗ ಮಹಾಕ್ಷಯ್ ಹಾಗೂ ಪತ್ನಿ ಯೋಗಿತಾ ಬಾಲಿಗೆ ಜಾಮೀನು ನೀಡಿದ್ದಾರೆ. ಮಿಥುನ್ ಕುಟುಂಬ ಭಾರತದಲ್ಲಿ ಬೇರೂರಿದ್ದು, ಓಡಿ ಹೋಗಲು ಸಾಧ್ಯವಿಲ್ಲವೆಂದು ನಿರೀಕ್ಷಣಾ ಜಾಮೀನು ನೀಡುವ ವೇಳೆ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇಬ್ಬರಿಗೂ ಒಂದು ಲಕ್ಷ ರೂಪಾಯಿ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ಭೋಜ್ಪುರಿ ನಟಿಯೊಬ್ಬಳು ಮಹಾಕ್ಷಯ್ ವಿರುದ್ಧ ದೂರು ನೀಡಿದ್ದಳು. ಮಹಾಕ್ಷಯ್ ಮದುವೆಯಾಗುವುದಾಗಿ ಆಸೆ ತೋರಿಸಿ ಸಂಬಂಧ ಬೆಳೆಸಿದ್ದಲ್ಲದೆ ಗರ್ಭಪಾತ ಮಾಡಿಸಿದ್ದಾನೆಂದು ಆಕೆ ದೂರಿದ್ದಳು. ಯೋಗಿತಾ ಬೆದರಿಕೆಯೊಡ್ಡಿದ್ದರು ಎಂದು ಪೀಡಿತೆ ದೂರು ನೀಡಿದ್ದಳು.

ಶನಿವಾರ ಮಿಥುನ್ ಮಗ ಮಹಾಕ್ಷಯ್ ಮದುವೆ ನಿಶ್ಚಯವಾಗಿತ್ತು. ಮದುವೆ ರದ್ದಾಗಿದ್ದು ವಧು ಕುಟುಂಬ ಊಟಿಯಿಂದ ವಾಪಸ್ ಆಗಿದೆ. ಮದುವೆ ಮಿಥುನ್ ಚಕ್ರವರ್ತಿ ಫಾರ್ಮ್ ಹೌಸ್ ನಲ್ಲಿ ನಡೆಯಬೇಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...