alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಧನದ ಭೀತಿಯಲ್ಲಿ ರಾಮ್ ಗೋಪಾಲ್ ವರ್ಮಾ…?

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಚಿತ್ರಗಳಿಗಿಂತ ಹೆಚ್ಚು ಪ್ರಚಾರದಲ್ಲಿರುತ್ತಾರೆ. ಅವರು ಮಾಡುವ ಕೆಲವೊಂದು ಟ್ವೀಟ್ ಗಳು ವಿವಾದವನ್ನು ಹುಟ್ಟು ಹಾಕಿದ್ದು ಈಗ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸತ್ಯ, ಸರ್ಕಾರ್, ರಂಗೀಲಾ ದಂತಹ ಚಿತ್ರಗಳನ್ನು ಕೊಟ್ಟ ರಾಮ್ ಗೋಪಾಲ್ ವರ್ಮಾ ಈಗ ಕಿರು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, “ಗಾಡ್ ಸೆಕ್ಸ್ ಟ್ರುಥ್” ಹೆಸರಿನ ಈ ಕಿರುಚಿತ್ರಕ್ಕೆ ಪೋರ್ನ್ ನಟಿ ಮಿಯಾ ಮಲ್ಕೋವಾಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಚಿತ್ರದ ಕುರಿತು ಕೆಲ ಪೋಟೋಗಳನ್ನು ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅಶ್ಲೀಲವಾಗಿದ್ದ ಈ ಫೋಟೋ ಹಲವರನ್ನು ಕೆರಳಿಸಿತ್ತು. ಇದರ ಕುರಿತು ರಾಮ್ ಗೋಪಾಲ್ ವರ್ಮಾ ಮಾಡಿದ ಟ್ವೀಟ್ ಕೂಡ ಆಕ್ರೋಶಕ್ಕೆ ಕಾರಣವಾಗಿದ್ದು. ಈ ಹಿನ್ನೆಲೆಯಲ್ಲಿ ಅವರನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆ ಫೋಟೋ ತಮ್ಮ ಕಿರು ಚಿತ್ರದ್ದಲ್ಲವೆಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆನ್ನಲಾಗಿದೆ. ಆಕೆಯನ್ನು ಭೇಟಿ ಮಾಡಲು ಹೋದಾಗ ಬೇರೋದು ಚಿತ್ರದ ಶೂಟಿಂಗ್ ನಲ್ಲಿ ಆಕೆ ಪಾಲ್ಗೊಂಡಿದ್ದು, ಆಗ ಈ ಚಿತ್ರ ತೆಗೆಯಲಾಗಿದೆ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ. ಅಗತ್ಯ ಬಿದ್ದರೆ ರಾಮ್ ಗೋಪಾಲ್ ವರ್ಮಾರನ್ನು ವಶಕ್ಕೆ ಪಡೆಯಲೂಬಹುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...