alex Certify
ಕನ್ನಡ ದುನಿಯಾ       Mobile App
       

Kannada Duniya

ರಾಖಿ ಬಂಧನ ವದಂತಿಯನ್ನು ತಳ್ಳಿ ಹಾಕಿದ ಪೊಲೀಸರು

rakhi1ಕಳೆದ ವರ್ಷ ನಡೆದ ಟಿವಿ ಸಂದರ್ಶನವೊಂದರಲ್ಲಿ ವಾಲ್ಮೀಕಿ ಸಮುದಾಯದ ಕುರಿತು ಅಪಮಾನಕಾರಿ ಹೇಳಿಕೆ ನೀಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ಬಂಧನವಾಗಿದೆ ಎಂಬ ವದಂತಿಯನ್ನು ಪಂಜಾಬ್ ನ ಲೂಧಿಯಾನ ಪೊಲೀಸರು ತಳ್ಳಿ ಹಾಕಿದ್ದಾರೆ.

ರಾಖಿ ಸಾವಂತ್ ಹೇಳಿಕೆ ವಿರುದ್ದ ಲೂಧಿಯಾನದ ವಕೀಲರೊಬ್ಬರು ಅಲ್ಲಿನ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ವಿಚಾರಣೆಗೆ ರಾಖಿ ಸಾವಂತ್ ಪದೇ ಪದೇ ಗೈರು ಹಾಜರಾಗಿದ್ದ ಕಾರಣ ನ್ಯಾಯಾಲಯ ಮಾರ್ಚ್ 9 ರಂದು ಬಂಧನ ವಾರಂಟ್ ಹೊರಡಿಸಿತ್ತು.

ರಾಖಿ ಸಾವಂತ್ ಗೆ ವಾರಂಟ್ ನೀಡಲು ಲೂಧಿಯಾನ ಪೊಲೀಸರ ತಂಡ ಭಾನುವಾರದಂದು ಮುಂಬೈಗೆ ತೆರಳಿತ್ತಾದರೂ ರಾಖಿ ಸಾವಂತ್ ಸಿಕ್ಕಿಲ್ಲವೆನ್ನಲಾಗಿದೆ. ಲೂಧಿಯಾನದ ಡೆಪ್ಯುಟಿ ಪೊಲೀಸ್ ಕಮೀಷನರ್ ದ್ರುಮನ್ ನಿಂಬ್ಲೆ ಈ ವಿಷಯ ಖಚಿತಪಡಿಸಿದ್ದು, ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...