alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ‘ಬಿಗ್ ಬಾಸ್’ ಸಂಭವನೀಯ ಸ್ಪರ್ಧಿಗಳ ಪಟ್ಟಿ

ಆರನೇ ಆವೃತ್ತಿ ಬಿಗ್ ಬಾಸ್ ಗೆ ಸಿದ್ಧತೆಗಳು ಭರದಿಂದ ನಡೆದಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಕಲಾಗುತ್ತಿದೆ. ಹಾಗಿದ್ರೆ, ಈ ಬಾರಿ ಯಾರೆಲ್ಲಾ ಬಿಗ್ ಬಾಸ್ ಎಂಬ ಮನೆಯಲ್ಲಿ ಲಾಕ್ ಆಗಿ 6 ಕೋಟಿ ಕನ್ನಡಿಗರ ಹೃದಯ ಗೆಲ್ಲೋಕೆ ಪ್ಲಾನ್ ಹಾಕಿಕೊಂಡಿದ್ದಾರೆ ಎಂಬುದಕ್ಕೆ ಈಗಾಗಲೇ ಹಲವು ಸ್ಟಾರ್ ಗಳ ಹೆಸರುಗಳು ಕೇಳಿ ಬರುತ್ತಿವೆ.

ಹಾಸ್ಯ ಕಲಾವಿದ ಟೆನಿಸ್ ಕೃಷ್ಣ ಈ ಬಾರಿ ಬಿಗ್ ಬಾಸ್ ಗೆ ಹೋಗ್ತಾರೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಇನ್ನು ನಿಖರ ಮಾಹಿತಿ ಸಿಕ್ಕಿಲ್ಲ. ಒಂದೊಮ್ಮೆ ಟೆನಿಸ್ ಕೃಷ್ಣ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದೇ ಆದಲ್ಲಿ, ಆಗೊಮ್ಮೆ ಈಗೊಮ್ಮೆ ಕಾಮಿಡಿ ಡೈಲಾಗ್ ಕೇಳುವ ಸದಾವಕಾಶ ಕನ್ನಡ ಅಭಿಮಾನಿಗಳಿಗೆ ಸಿಗಲಿದೆ.

ಬಿಜೆಪಿ ಶಾಸಕ ರಾಮದಾಸ್ ಎಂಬ ಹೆಸರು ಕೇಳುತ್ತಿದ್ದಂತೆ, ಪ್ರೇಮಕುಮಾರಿ ಮುಖ ನಮ್ಮ ಕಣ್ಣ ಮುಂದೆ ಬಾರದೆ ಇರದು. ಇವರಿಬ್ಬರ ವಿಷಯ ಇಡೀ ಕರ್ನಾಟಕಕ್ಕೆ ಗೊತ್ತಿದ್ದು, ಪ್ರೇಮಕುಮಾರಿ ಸಹ ಬಿಗ್ ಬಾಸ್ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನಲಾಗುತ್ತಿದೆ.

ನಟಿ ಶುಭಾ ಪುಂಜಾ, ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವ ಕುರಿ ಪ್ರತಾಪ್, ಹಾಡುಗಳನ್ನು ಕೆಟ್ಟದಾಗಿ ಹಾಡಿ ಸುದ್ದಿ ಮಾಡಿದ್ದ ತುಳಸಿ ಪ್ರಸಾದ್, ಟಕಿಲಾ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ಮನ ಗೆದ್ದಿದ್ದ ಶಾಲಿನಿ ಗೌಡ, ನಟಿ ಸುಮನ್ ರಂಗನಾಥ್, ಐದು ರೂಪಾಯಿ ಡಾಕ್ಟರ್ ಶಂಕರೇ ಗೌಡ, ಹೇಮಲತಾ ಹೆಸರುಗಳು ಕೇಳಿ ಬರುತ್ತಿವೆ. ಇವರ ಜೊತೆಗೆ ಶಿವರಾಜ್ ಕೆ.ಆರ್. ಪೇಟೆ, ನಟ ಅನಿರುದ್ಧ, ಪುಟ್ಟ ಗೌರಿ ಖ್ಯಾತಿಯ ರಂಜನಿ ಹೆಸರುಗಳು ಸಹ ಬಹುವಾಗಿ ಚಾಲ್ತಿಯಲ್ಲಿದೆ. ಅಸಲಿಗೆ 100 ದಿನ ಬಿಗ್ ಬಾಸ್ ಮನೆಯೊಳಗೆ ಯಾರು ಹೋಗಲು ಸೈ ಎಂದಿದ್ದಾರೆ ಎಂಬುದು ಇನ್ನು ಕನ್ಫರ್ಮ್ ಆಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...