alex Certify
ಕನ್ನಡ ದುನಿಯಾ       Mobile App
       

Kannada Duniya

ಸುಲೇಮಾನ್ ‘ಇಂಡಿಯಾಸ್ ಗಾಟ್ ಟಾಲೆಂಟ್’ ವಿನ್ನರ್

suleiman

ಮುಂಬೈ: ಭಾರೀ ನಿರೀಕ್ಷೆ ಮೂಡಿಸಿದ ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಟಾಲೆಂಟ್’ 7ನೇ ಆವೃತ್ತಿಯಲ್ಲಿ ಅಮೃತ್ ಸರದ 13 ವರ್ಷದ ಬಾಲಕ ಸುಲೇಮಾನ್ ವಿಜೇತನಾಗಿದ್ದಾನೆ. ಸ್ವರ ಮಾಂತ್ರಿಕ ಸುಲೇಮಾನ್ ಗೆ ಇನ್ನೂ 13 ವರ್ಷ ವಯಸ್ಸು.

ಏಪ್ರಿಲ್ ನಲ್ಲಿ ಆರಂಭವಾಗಿದ್ದ ‘ಇಂಡಿಯಾಸ್ ಗಾಟ್ ಟಾಲೆಂಟ್’ ಶೋನಲ್ಲಿ ಖ್ಯಾತ ನಿರ್ದೇಶಕ ಕರಣ್ ಜೋಹರ್, ನಟಿ ಮಲೈಕಾ ಅರೋರಾ ಹಾಗೂ ಕಿರಣ್ ಖೇರ್ ತೀರ್ಪುಗಾರರಾಗಿದ್ದರು. ಸುಲೇಮಾನ್ ನನ್ನು ವೀಕ್ಷಕರೇ ವಿಜೇತನನ್ನಾಗಿ ಆಯ್ಕೆ ಮಾಡಿದ್ದಾರೆ. ವೀಕ್ಷಕರ ಮನಸೆಳೆದ ಜನಪ್ರಿಯ ಕಾರ್ಯಕ್ರಮ ಇದಾಗಿದ್ದು, ಫೈನಲ್ ನಲ್ಲಿ ಆಕಾಶ್, ಅಥರ್ವ, ಅಂತರಾ ಹಾಗೂ ಪಾಪೈ ಪೈಪೋಟಿಯಲ್ಲಿದ್ದರು. ಅವರೆಲ್ಲರ ನಡುವೆ ಕೊಳಲು ವಾದನದಿಂದ ಮನಸೂರೆಗೊಂಡ ಸುಲೇಮಾನ್ ವಿಜೇತರಾಗಿ ಹೊರ ಹೊಮ್ಮಿದ್ದಾನೆ.

ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಬಳಿ ಅಭ್ಯಾಸ ಮಾಡುತ್ತಿರುವ ಸುಲೇಮಾನ್ ಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಸಿಂಗರ್ ಅರಿಜಿತ್ ಸಿಂಗ್ ಇಷ್ಟವಂತೆ. ಪ್ರಶಸ್ತಿ ವಿಜೇತನಾಗಿರುವುದಕ್ಕೆ ಖುಷಿಯಾಗಿದೆ ಎಂದು ಸುಲೇಮಾನ್ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...