alex Certify
ಕನ್ನಡ ದುನಿಯಾ       Mobile App
       

Kannada Duniya

‘ಗಲ್ಲಿ ಬಾಯ್’ ರಣವೀರ್ ಗೆ ಆಲಿಯಾ ನಾಯಕಿ !

22-ranveer-alia

ಇದೇ ಮೊದಲ ಬಾರಿಗೆ ನಟ ರಣವೀರ್ ಸಿಂಗ್ ಹಾಗೂ ನಟಿ ಆಲಿಯಾ ಭಟ್ ತೆರೆ ಮೇಲೆ ಜೋಡಿಯಾಗ್ತಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಚಿತ್ರದಲ್ಲಿ ರಣವೀರ್ ಗೆ ಆಲಿಯಾ ಭಟ್ ನಾಯಕಿಯಾಗಲಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಗೆ ಜೋಡಿಯಾಗಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ನಟಿಸ್ತಾರೆ ಅನ್ನೋ ಸುದ್ದಿಯಿತ್ತು.

ಆದ್ರೆ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ರಣವೀರ್ ಹಾಗೂ ಆಲಿಯಾ ‘ಗಲ್ಲಿ ಬಾಯ್’ ಚಿತ್ರದ ನಾಯಕ-ನಾಯಕಿ ಅಂತಾ ಪ್ರಕಟಿಸಲಾಗಿದೆ. ‘ಗಲ್ಲಿ ಬಾಯ್’ ನೈಜ ಬದುಕಿನ ಘಟನೆ ಆಧಾರಿತ ಚಿತ್ರ. ಮುಂಬೈನ ಗಲ್ಲಿ, ಮೊಹಲ್ಲಾ ಬಗೆಗಿನ ಸಿನೆಮಾ ಇದು.

ಈ ಬಗ್ಗೆ ಟ್ವೀಟ್ ಮಾಡಿರೋ ರಣವೀರ್, ಆಲಿಯಾಳನ್ನ ಹಾಡಿ ಹೊಗಳಿದ್ದಾರೆ. ಕಳೆದ ವರ್ಷ ರಣವೀರ್ ‘ಬೇಫಿಕ್ರೆ’ ಚಿತ್ರದಲ್ಲಿ ಕಾಣಿಸಿಕೊಂಡಿದ್ರು, ಆದ್ರೆ ಸಿನೆಮಾ ಬಾಕ್ಸಾಫೀಸ್ ನಲ್ಲಿ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಸದ್ಯ ಆಲಿಯಾ ಭಟ್ ತಮ್ಮ ‘ಬದ್ರಿನಾಥ್ ಕಿ ದುಲ್ಹನಿಯಾ’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...