alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ-ಪ್ರಭಾಸ್ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಫೋಟಕ ಸುದ್ದಿ..!

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಬೆಸ್ಟ್ ಆನ್ ಸ್ಕ್ರೀನ್ ಜೋಡಿ. ಬಾಹುಬಲಿಯಲ್ಲಿ ಇವರಿಬ್ಬರ ಕೆಮೆಸ್ಟ್ರಿಯನ್ನು ಮೆಚ್ಚಿಕೊಳ್ಳದವರೇ ಇಲ್ಲ. ನಿಜ ಜೀವನದಲ್ಲೂ ಇವರಿಬ್ಬರು ಮದುವೆಯಾಗಬೇಕು ಅನ್ನೋ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಅನುಷ್ಕಾ ಹಾಗೂ ಪ್ರಭಾಸ್ ಡೇಟಿಂಗ್ ಮಾಡ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗ್ತಾರೆ ಅನ್ನೋ ಗಾಸಿಪ್ ಕೇಳಿಬಂದಿತ್ತು. ಆದ್ರೆ ಪ್ರಭಾಸ್ ಇದನ್ನು ತಳ್ಳಿಹಾಕಿದ್ದರು. ಇದೀಗ ಸೆನ್ಸಾರ್ ಮಂಡಳಿಯ ಸದಸ್ಯರೊಬ್ರು ಹೊಸ ಬಾಂಬ್ ಹಾಕಿದ್ದಾರೆ.

ಪ್ರಭಾಸ್ ಹಾಗೂ ಅನುಷ್ಕಾ ಪರಸ್ಪರ ಪ್ರೀತಿಸ್ತಿರೋದು ಖಚಿತ ಅಂತಾ ಟ್ವೀಟ್ ಮಾಡಿದ್ದಾರೆ. ಉಮೈರ್ ಸಂಧು ಎಂಬಾತ ಹೀಗೆ ಟ್ವೀಟ್ ಮಾಡಿದ್ರು. ಇಬ್ಬರೂ 2018ರಲ್ಲಿ ಮದುವೆಯಾಗಲಿದ್ದಾರೆ ಅಂತಾನೂ ಬರೆದುಕೊಂಡಿದ್ರು. ಈ ಟ್ವೀಟ್ ವೈರಲ್ ಆಗ್ತಿದ್ದಂತೆ ಅದನ್ನು ಡಿಲೀಟ್ ಮಾಡಲಾಗಿದೆ.

ಹಾಗಾಗಿ ಇದು ಅಸಲಿಯೋ ಅಥವಾ ನಕಲಿಯೋ ಅನ್ನೋ ಅನುಮಾನ ವ್ಯಕ್ತವಾಗಿದೆ. ಯಾರೋ ಬೇಕೆಂತಲೇ ಸುಳ್ಳು ಹೆಸರಲ್ಲಿ ಟ್ವೀಟ್ ಮಾಡಿರಬಹುದು ಅಂತಾನೂ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...