alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಲೆ ಖರೀದಿಸಿ ಸಂಕಷ್ಟಕ್ಕೆ ಸಿಲುಕಿದ ಕಂಗನಾ

ಬಂಗಲೆ ಖರೀದಿಸುವಲ್ಲಿ ಸಹಕರಿಸಿದ ಮಧ್ಯವರ್ತಿಗೆ ಹಣ ನೀಡದ ಆರೋಪದಲ್ಲಿ ಬಾಲಿವುಡ್‌ ನಟಿ ಕಂಗನಾ ರನಾವತ್ ವಿರುದ್ದ ಪ್ರಕರಣ ದಾಖಲಾಗಿದೆ.

ಅಪ್‌ಮಾರ್ಕೆಟ್‌ ಪಾಲಿ ಹಿಲ್‌ನಲ್ಲಿ 2017ರ ಸೆಪ್ಟೆಂಬರ್‌ನಲ್ಲಿ 20.07 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ್ದ ಬಂಗಲೆಗೆ ಮಧ್ಯವರ್ತಿಗೆ ಶೇ.1 ರಷ್ಟು ಕಮಿಷನ್‌ ಕೊಟ್ಟಿಲ್ಲ ಎಂದು ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕಾಶ್‌ ಜಿ ರೋಹಿರಾ ಎಂಬವರು, 20 ಲಕ್ಷ ರೂ. ಶುಲ್ಕವನ್ನು ಪಾವತಿಸಿಲ್ಲ. ಹೀಗಾಗಿ ಪ್ರಸ್ತುತ ಶೇ.1ರ ಬದಲಿಗೆ ಶೇ.2 ರಷ್ಟು ಕಮೀಷನ್ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ಒಟ್ಟಾರೆ 3,075 ಚದರಡಿ ಜಾಗದ ಬಂಗಲೆ ಖರೀದಿ ವೇಳೆ 1.03 ಕೋಟಿ ರೂ. ಸ್ಟ್ಯಾಂಪ್‌ ಡ್ಯೂಟಿ ಹಾಕಲಾಗಿತ್ತು. ತಮ್ಮ ಕಮೀಷನ್ ಪಾವತಿಸದೇ ಇದ್ದ ಕಾರಣ ನಿಯಮಾನುಸಾರ ಪ್ರಸ್ತುತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಪ್ರಕಾಶ್‌ ವಾದಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...