alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕರ್ ತೂಗುದೀಪ ಹಾಗೂ ಬುಲೆಟ್ ಪ್ರಕಾಶ್ ನಡುವೆ ನಡೆದಿದ್ದೇನು..?

bullet-prakash-in-itrallappo-baththi-kannada-movie-news

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಸಹೋದರ ದಿನಕರ್ ತೂಗುದೀಪ ಹಾಗೂ ಹಾಸ್ಯ ನಟ ಬುಲೆಟ್ ಪ್ರಕಾಶ್ ಕಿತ್ತಾಡಿಕೊಂಡಿರುವ ವಿಚಾರ ಈಗ ಸ್ಯಾಂಡಲ್ ವುಡ್ ನಲ್ಲಿ ಚರ್ಚೆಗೆ ಕಾರಣವಾಗಿದೆ. ಅತ್ಮೀಯರಾಗಿದ್ದ ಇವರುಗಳು ಪ್ರಕರಣ ಠಾಣೆಯ ಮೆಟ್ಟಿಲೇರುವ ಮಟ್ಟಕ್ಕೆ ಮುಂದುವರೆದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಮೂಡಿವೆ.

ಬುಲೆಟ್ ಪ್ರಕಾಶ್ ಹೇಳುವ ಪ್ರಕಾರ, ತಮಿಳು ಚಿತ್ರವೊಂದರ ರಿಮೇಕ್ ಹಕ್ಕು ಪಡೆದಿದ್ದ ಅವರು, ದರ್ಶನ್ ರನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಆದರೆ ಇದು ದರ್ಶನ್ ಸಹೋದರ ದಿನಕರ್ ತೂಗುದೀಪ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಚಿತ್ರವೊಂದರ ಸೆಟ್ ನಲ್ಲಿ ಬುಲೆಟ್ ಪ್ರಕಾಶ್ ಅದೇಗೆ ಚಿತ್ರ ಮಾಡುತ್ತಾರೋ ನೋಡುತ್ತೇನೆ ಎಂದಿದ್ದ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಇದನ್ನು ಕೇಳಲು ಫೋನ್ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಫೋನ್ ನಲ್ಲಿ ಮಾತನಾಡುವುದು ಬೇಡ. ಮುಖಾಮುಖಿ ಭೇಟಿಯಾಗಿ ಮಾತನಾಡೋಣವೆಂದು ಹೇಳಿದಾಗ ಅದರಂತೆ ತಾವು ಹೋದ ವೇಳೆ ದಿನಕರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಅವರು ಹಾಗೂ ಅವರ ಸ್ನೇಹಿತ ಪಿಸ್ತಾ ಸೀನ ಹಲ್ಲೆಯನ್ನೂ ಮಾಡಿದ್ದಾರೆ. ಜೊತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಿನಕರ್ ತೂಗುದೀಪ, ದರ್ಶನ್ ಈಗಾಗಲೇ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದ ಕಾರಣ ಬುಲೆಟ್ ಪ್ರಕಾಶ್ ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿದ್ದರಿಂದ ಆ ನಿರ್ಮಾಪಕರುಗಳು ಆತಂಕಕ್ಕೆ ಒಳಗಾಗುತ್ತಾರೆ. ಹಾಗಾಗಿ ಖಚಿತಪಡುವವರೆಗೂ ಬಹಿರಂಗ ಮಾಡಬೇಡಿ ಎಂದು ಹೇಳಿದ್ದೇನೆ ಹೊರತು ಬುಲೆಟ್ ಪ್ರಕಾಶ್ ಬಗ್ಗೆ ಬೇರೆಯವರ ಬಳಿ ಮಾತನಾಡಿಲ್ಲ. ಅವರು ಫೋನ್ ಮಾಡಿದ ವೇಳೆ ಮುಖಾಮುಖಿ ಮಾತನಾಡೋಣವೆಂದು ಹೇಳಿದ್ದೆ. ಅವರು ತಮ್ಮ ಪುತ್ರಿಯೊಂದಿಗೆ ಆಗಮಿಸಿದ ಕಾರಣ ಜೊತೆಗೆ ಬುಲೆಟ್ ಪ್ರಕಾಶ್ ಕುಡಿದಿದ್ದರಿಂದ ಹೆಚ್ಚು ಮಾತನಾಡದೆ ಅಲ್ಲಿಂದ ಹೋಗಿದ್ದೇವೆ. ಯಾರೂ ಹಲ್ಲೆ ಮಾಡಿಲ್ಲವೆಂದಿದ್ದಾರೆ.

ಈಗಾಗಲೇ ಬುಲೆಟ್ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಂದು ದಿನಕರ್ ತೂಗುದೀಪ ಸಹ ಅಲ್ಲಿಗೆ ಆಗಮಿಸಿದ್ದಾರೆಂದು ಹೇಳಲಾಗಿದೆ. ಇಬ್ಬರನ್ನೂ ಬಲ್ಲ ಹಿತೈಷಿಗಳು, ಪೊಲೀಸ್ ದೂರು ಬೇಡ ನಮ್ಮಲ್ಲೇ ಬಗೆಹರಿಸಿಕೊಳ್ಳೋಣಾ ಎಂಬ ಸಲಹೆ ನೀಡಿದ್ದಾರೆನ್ನಲಾಗಿದ್ದು, ಇದಕ್ಕೆ ಬುಲೆಟ್ ಪ್ರಕಾಶ್ ಏನು ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...