alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲೇಜ್ ಕುಮಾರ’ನಿಗೆ ಕೈಕೊಟ್ಟ ನಟಿ ಸಂಯುಕ್ತ?

download

ಕಿರಿಕ್ ಪಾರ್ಟಿ ಚಿತ್ರದ ನಟಿ ಸಂಯುಕ್ತ ಹೆಗಡೆ ವಿರುದ್ಧ ಆರೋಪ ಕೇಳಿಬಂದಿದೆ. ನಟಿ ಸಂಯುಕ್ತ ಹೆಗಡೆ ‘ಕಾಲೇಜ್ ಕುಮಾರ್’ ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಿಲ್ಲ ಎಂದು ಚಿತ್ರತಂಡ ಆರೋಪ ಮಾಡಿದೆ.

ಅಲೆಮಾರಿ ಸಂತು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರದ ಮುಹೂರ್ತ ಪ್ಯಾಲೇಸ್ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನರೆವೇರಿತ್ತು. ಚಿತ್ರದ ನಾಯಕನಾಗಿ ಕೆಂಡ ಸಂಪಿಗೆ ವಿಕ್ಕಿ ಕಾಣಿಸಿಕೊಳ್ಳುತ್ತಿದ್ದಾರೆ. ಎಂ.ಆರ್.ಪಿಕ್ಚರ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗ್ತಿದೆ.

ಮಾಧ್ಯಮಗಳ ವರದಿ ಪ್ರಕಾರ, ಕೊನೆ ಹಂತದಲ್ಲಿ ಸಂಯುಕ್ತ ಹೆಗಡೆ ಕೈ ಕೊಟ್ಟಿದ್ದಾರೆ. ಚಿತ್ರೀಕರಣಕ್ಕೆ ನಟಿ ಬರಲಿಲ್ಲ ಎಂದು ಚಿತ್ರತಂಡ ಆರೋಪ ಮಾಡಿದೆ. ತಮಿಳು ಚಿತ್ರಕ್ಕಾಗಿ ಕನ್ನಡ ಚಿತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಸಂಬಂಧ ನಿರ್ಮಾಪಕರ ಸಂಘದ ಜೊತೆ ಮಾತನಾಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...