alex Certify
ಕನ್ನಡ ದುನಿಯಾ       Mobile App
       

Kannada Duniya

‘ಜೆಸ್ಸಿ’ ಚಿತ್ರದ ಬಗ್ಗೆ ‘ಬಾಹುಬಲಿ’ ಕತೆಗಾರ ಹೇಳಿದ್ದೇನು?

jessi 27

ಬೆಂಗಳೂರು: ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪವನ್ ಒಡೆಯರ್ ನಿರ್ದೇಶನದ ‘ಜೆಸ್ಸಿ’ ಸಿನೆಮಾ ಟಾಲಿವುಡ್ ನಲ್ಲಿಯೂ ರಿಲೀಸ್ ಆಗಲಿದೆ. ಅಂದಹಾಗೇ ‘ಜೆಸ್ಸಿ’ ಸಿನೆಮಾವನ್ನು ‘ಬಾಹುಬಲಿ’ ಸಿನೆಮಾಕ್ಕೆ ಕತೆ ಬರೆದಿರುವ ವಿಜಯೇಂದ್ರ ಪ್ರಸಾದ್ ವೀಕ್ಷಿಸಿದ್ದಾರೆ.

ಚಿತ್ರದ ಬಗ್ಗೆ ಕೇಳಿ ತಿಳಿದುಕೊಂಡ ವಿಜಯೇಂದ್ರ ಪ್ರಸಾದ್ ‘ಜೆಸ್ಸಿ’ ಸಿನೆಮಾ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’, ಪ್ರಭಾಸ್ ಅಭಿನಯದ ‘ಬಾಹುಬಲಿ’, ಕಿಚ್ಚ ಸುದೀಪ್ ಅಭಿನಯದ ‘ಈಗ’ ಹಾಗೂ ರಾಮ್ ಚರಣ್ ಅಭಿನಯದ ‘ಮಗಧೀರ’ದಂತಹ ಸಿನೆಮಾಗಳಿಗೆ ಕತೆ, ಚಿತ್ರಕತೆ ಮಾಡಿರುವ ವಿಜಯೇಂದ್ರ ಪ್ರಸಾದ್ ಅವರು ತಮ್ಮ ಚಿತ್ರವನ್ನು ಮೆಚ್ಚಿಕೊಂಡಿರುವುದು ‘ಜೆಸ್ಸಿ’ ಟೀಂ ಖುಷಿಯನ್ನು ಇಮ್ಮಡಿಗೊಳಿಸಿದೆ.

ಅವರ ಸಲಹೆಯಂತೆಯೇ ಶೀಘ್ರವೇ ತೆಲುಗು ವರ್ಷನ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಧನಂಜಯ್, ಪಾರುಲ್ ಯಾದವ್, ರಘು ಮುಖರ್ಜಿ ಮುಖ್ಯ ಭೂಮಿಕೆಯಲ್ಲಿರುವ ‘ಜೆಸ್ಸಿ’ ಸಿನೆಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪವನ್ ಒಡೆಯರ್ ಈಗಾಗಲೇ ತೆಲುಗಿನಲ್ಲಿ ಹಿಟ್ ಸಿನೆಮಾವೊಂದನ್ನು ನಿರ್ದೇಶಿಸಿದ್ದು, ‘ಜೆಸ್ಸಿ’ ಚಿತ್ರವನ್ನೂ ತೆಲುಗಿನಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...