alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕಾರಣ ಮತ್ತು ಚಿತ್ರರಂಗ : ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಖ್ಯಾತ ನಟ ಕಮಲ್ ಹಾಸನ್ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ರಾಜಕಾರಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷ ಸ್ಥಾಪಿಸಿದ ಬಳಿಕ, ಕಮಲ್ ಹಾಸನ್ ಕೂಡ ರಾಜಕೀಯ ಪ್ರವೇಶಿಸಿರುವುದು ತಮಿಳುನಾಡಿನಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ.

ಚಿತ್ರರಂಗ ಮತ್ತು ರಾಜಕಾರಣ ಬೇರೆ ಕ್ಷೇತ್ರಗಳಾದರೂ ಇವೆರಡಕ್ಕೂ ಸಂಬಂಧವಿದೆ. ಚಿತ್ರರಂಗದಲ್ಲಿದ್ದವರು ರಾಜಕೀಯದಲ್ಲಿ, ರಾಜಕೀಯದಲ್ಲಿದ್ದವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಎನ್.ಟಿ.ಆರ್. ಮುಖ್ಯಮಂತ್ರಿಯಾಗಿದ್ದರು. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ಎಂ.ಜಿ.ಆರ್., ಜಯಲಲಿತಾ, ಕರುಣಾನಿಧಿ ಅವರು ಚಿತ್ರರಂಗದಿಂದ ಬಂದವರೇ.

ಇನ್ನು ಕರ್ನಾಟಕದಲ್ಲಿ ಚಿತ್ರ ನಿರ್ಮಾಪಕರಾದ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೇರಿದ್ದರು. ಸಚಿವೆ ಉಮಾಶ್ರೀ, ಮಾಜಿ ಸಚಿವ ಅಂಬರೀಶ್ ಚಿತ್ರರಂಗದ ಜೊತೆಗೆ ರಾಜಕಾರಣದಲ್ಲಿಯೂ ಮಿಂಚಿದ್ದಾರೆ. ಹಿಂದಿನಿಂದಲೂ ರಾಜಕಾರಣದಲ್ಲಿದ್ದವರು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ಸಿ.ಎಂ. ರಾಮಕೃಷ್ಣ ಹೆಗ್ಡೆ ಸಿನಿಮಾದಲ್ಲಿ ಅಭಿನಯಿಸಿದ್ದರು.

ಉಪೇಂದ್ರ, ಜಗ್ಗೇಶ್, ಶ್ರುತಿ, ಮಾಳವಿಕಾ, ಜಯಮಾಲಾ, ಅನಂತನಾಗ್, ಕುಮಾರ್ ಬಂಗಾರಪ್ಪ, ರಮ್ಯಾ, ರಕ್ಷಿತಾ, ಪೂಜಾ ಗಾಂಧಿ, ಇನ್ನು ಜಯಾ ಬಚ್ಚನ್, ಜಯಪ್ರದಾ, ಸ್ಮೃತಿ ಇರಾನಿ, ಶತ್ರುಘ್ನ ಸಿನ್ಹಾ, ಗೋವಿಂದ, ಬಾಲಕೃಷ್ಣ, ಚಿರಂಜೀವಿ ಸೇರಿದಂತೆ ಹಲವಾರು ಕಲಾವಿದರು ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ಸಕ್ರಿಯವಾಗಿದ್ದರೆ, ಮತ್ತೆ ಕೆಲವರು ರಾಜಕೀಯದಿಂದ ದೂರ ಸರಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...