alex Certify
ಕನ್ನಡ ದುನಿಯಾ       Mobile App
       

Kannada Duniya

ದಸರಾ ಹಬ್ಬಕ್ಕೆ ಸೂಪರ್ ಸ್ಟಾರ್ಸ್ ಕಾಳಗ

pva-mahe

ಟಾಲಿವುಡ್ ಸೂಪರ್ ಸ್ಟಾರ್ ಗಳಿಬ್ಬರ ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿದ್ದು, ಮತ್ತೊಮ್ಮೆ ಸ್ಟಾರ್ ವಾರ್ ಶುರುವಾಗಲಿದೆ.

ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಯಶಸ್ವಿ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ‘ಸ್ಪೈಡರ್’ ಸೆಪ್ಟಂಬರ್ 27 ರಂದು ದಸರಾ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ.

ದಸರಾ ಹಬ್ಬದಲ್ಲಿ ರಿಲೀಸ್ ಆಗಿದ್ದ ‘ದೂಕುಡು’ ಯಶಸ್ವಿಯಾಗಿದ್ದರಿಂದ ‘ಸ್ಪೈಡರ್’ ಚಿತ್ರವನ್ನು ಅದೇ ವೇಳೆಗೆ ರಿಲೀಸ್ ಮಾಡುವ ಆಶಯ ಮಹೇಶ್ ಬಾಬು ಅವರದ್ದಾಗಿದೆ. ಈಗಾಗಲೇ ಟೀಸರ್ ಮೂಲಕ ಭಾರೀ ಸೌಂಡ್ ಮಾಡಿರುವ ‘ಸ್ಪೈಡರ್’ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

‘ಸ್ಪೈಡರ್’ ರಿಲೀಸ್ ಆಗುವ ದಿನವೇ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ, ತ್ರಿವಿಕ್ರಮ್ ನಿರ್ದೇಶನದ ಚಿತ್ರ(ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ) ತೆರೆಗೆ ಬರಲಿದೆ.

ಪವನ್ ಕಲ್ಯಾಣ್ ಅವರ ವೃತ್ತಿ ಬದುಕಿನ ಪ್ರಮುಖ ಚಿತ್ರ ಇದಾಗಿದ್ದು, ಅವರ ಪಾಲಿನ ಲಕ್ಕಿ ಡೈರೆಕ್ಟರ್ ತ್ರಿವಿಕ್ರಮ್ ನಿರ್ದೇಶನವಿದೆ. ಸೆಪ್ಟಂಬರ್ 27 ರಂದು ಸೂಪರ್ ಸ್ಟಾರ್ ಸಿನಿಮಾ ಎದುರೇ ತಮ್ಮ ಸಿನಿಮಾ ರಿಲೀಸ್ ಮಾಡಲು ಪವರ್ ಸ್ಟಾರ್ ಮುಂದಾಗಿದ್ದಾರೆ. ದಸರಾ ವೇಳೆಗೆ ಟಾಲಿವುಡ್ ನಲ್ಲಿ ಮತ್ತೆ ಸೂಪರ್ ಪವರ್ ಕಾಳಗ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...