alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರನ ‘ಜಾಗ್ವಾರ್’ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

jaguar 6

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿರುವ, ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದ ಟಾಕಿ ಪೋಷನ್ ಶೂಟಿಂಗ್ ಶೇ.40 ರಷ್ಟು ಪೂರ್ಣಗೊಂಡಿದೆ. ‘ಜಾಗ್ವಾರ್’ ಸಾಹಸದ ದೃಶ್ಯಗಳನ್ನು ವಿಶೇಷ ಕ್ಯಾಮೆರಾ ಬಳಸಿ ಚಿತ್ರೀಕರಿಸಲಾಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರಕ್ಕೆ ಬಳಸಿದ ಹಾಲಿವುಡ್ ತಂತ್ರಜ್ಞಾನ ಬಳಸಿ ‘ಜಾಗ್ವಾರ್’ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಇದಕ್ಕಾಗಿ ಮೈಸೂರು ಸಮೀಪ ಸುಮಾರು 2 ಕೋಟಿ ರೂ ವೆಚ್ಛದಲ್ಲಿ ವಿಶೇಷ ಸೆಟ್ ಗಳನ್ನು ನಿರ್ಮಿಸಲಾಗುತ್ತಿದೆ. ಖ್ಯಾತ ಕಲಾ ನಿರ್ದೇಶಕ ನಾರಾಯಣ ರೆಡ್ಡಿ ಸೆಟ್ ನಿರ್ಮಾಣ ಮಾಡುತ್ತಿದ್ದು, ದೇಶದ ಬಹುಬೇಡಿಕೆಯ ಸಾಹಸ ನಿರ್ದೇಶಕ ರವಿವರ್ಮ ಸಾಹಸ ಚಿತ್ರಕ್ಕಿದೆ. ಮಹದೇವ್ ಸಿನೆಮಾ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ನಿಖಿಲ್ ಕುಮಾರ್ ತಂದೆಯ ಪಾತ್ರದಲ್ಲಿ ಶರತ್ ಕುಮಾರ್, ತಾಯಿಯ ಪಾತ್ರದಲ್ಲಿ ಮೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಸಾಹಸ ಸನ್ನಿವೇಶಕ್ಕೆ ಸೆಟ್ ಹಾಕಲು ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ.

ನಂತರ ಹೈದರಾಬಾದ್ ನಲ್ಲಿ ಹಾಕಲು ತೀರ್ಮಾನಿಸಲಾಗಿತ್ತಾದರೂ, ಅಲ್ಲಿ ಉಷ್ಣಾಂಶ ಜಾಸ್ತಿ ಎಂಬ ಕಾರಣಕ್ಕೆ ಮೈಸೂರಿನಲ್ಲಿ ಸೆಟ್ ಹಾಕುತ್ತಿದ್ದೇವೆ. ರವಿವರ್ಮ ಸಾಹಸ ನಿರ್ದೇಶನವಿದ್ದು, ಹಾಂಕಾಂಗ್ ನಿಂದ ಫೈಟ್ ಮಾಸ್ಟರ್ ಆಗಮಿಸಲಿದ್ದಾರೆ. ಸಾಹಸ ಸನ್ನಿವೇಶಗಳಿಗೆ ಈ ಸೆಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...